







ಪುತ್ತೂರು: ಕೃಷ್ಣನಗರ ಬಡಾವು ನಿವಾಸಿ ಯುವಕರೊಬ್ಬರು ಮನೆಯಂಗಳದಲ್ಲಿ ತನ್ನ ವಾಹನ ತೊಳೆಯುತ್ತಿದ್ದ ವೇಳೆ ಸ್ಥಳದಲ್ಲಿ ಮೃತಪಟ್ಟ ಘಟನೆ ಸೆ.18ರಂದು ಮಧ್ಯಾಹ್ನ ನಡೆದಿರುವ ಬಗ್ಗೆ ವರದಿಯಾಗಿದೆ.
ಕೃಷ್ಣನಗರ ಬಡಾವು ನಿವಾಸಿ ಈಶ್ವರ ನಾಯ್ಕ ಎಂಬವರ ಪುತ್ರ ಪುತ್ತೂರು ಅಪೋಲೋ ಮೆಡಿಕಲ್ ಸೆಂಟರ್ ಉದ್ಯೋಗಿಯಾಗಿರುವ ರಕ್ಷಿತ್ (29ವ) ಎಂಬವರು ಮೃತಪಟ್ಟವರು. ರಕ್ಷಿತ್ ಅವರು ಮಧ್ಯಾಹ್ನದ ಶಿಫ್ಟ್ ಕೆಲಸ ಮುಗಿಸಿ ಮನೆಗೆ ಬಂದವರು ಮನೆಯಂಗಳದಲ್ಲಿ ತನ್ನ ವಾಹನ ತೊಳೆಯುತ್ತಿದ್ದರೆನ್ನಲಾಗಿದೆ. ಆದರೆ ಅವರು ಬಿದ್ದಿರುವ ಸ್ಥಳದಲ್ಲಿ ವಾಹನ ತೊಳೆಯುವ ಮೆಷಿನ್ ಸಹ ಇದ್ದು. ವಿದ್ಯುತ್ ಶಾಕ್ನಿಂದ ಅವರು ಬಿದ್ದಿರಬಹುದೆನ್ನಲಾಗಿದೆ. ಈ ಕುರಿತು ಸ್ಥಳೀಯರು ನೋಡಿ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.


ಮೃತರು ತಂದೆ ಈಶ್ವರ ನಾಯ್ಕ,ತಾಯಿ, ಸಹೋದರಿಯನ್ನು ಅಗಲಿದ್ದಾರೆ. ಘಟನೆ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.













