20 ವರ್ಷದ ರುಚಿಗೆ ಹೊಸ ರೂಪ : (ಸೆ.21) ಶ್ರೀ ವೆಂಕಟೇಶ್ವರ ಅಯ್ಯಂಗಾರ್ ಬೇಕರಿ ಸ್ಥಳಾಂತರಗೊಂಡು ಶುಭಾರಂಭ

0

ಶುಭಾರಂಭದ ಪ್ರಯುಕ್ತ 10ರೂ.ಗೆ ವಿವಿಧ ಬೇಕರಿ ಐಟಂಗಳು

ಪುತ್ತೂರು: ನಗರದ ಜನಪ್ರಿಯ ಶ್ರೀ ವೆಂಕಟೇಶ್ವರ ಅಯ್ಯಂಗಾರ್ ಬೇಕರಿ ಇದೀಗ ಬೊಳ್ವಾರಿನ ಮುಖ್ಯ ರಸ್ತೆ, ರಿಲಯನ್ಸ್ ಮಾರ್ಟ್ ಬಳಿ, ಆಕ್ಸಿಸ್ ಬ್ಯಾಂಕ್ ಎದುರುಗಡೆ ಸ್ಥಳಾಂತರಗೊಂಡು ಸೆ. 21ರಂದು ಶುಭಾರಂಭಗೊಳ್ಳಲಿದೆ.

ಸುಮಾರು 20 ವರ್ಷಗಳಿಂದ ಪುತ್ತೂರಿಗರ ನಾಲಿಗೆ ರುಚಿ ತಣಿಸುತ್ತಿದ್ದ ಬೇಕರಿ ಇದೀಗ ಸ್ಥಳಾಂತರಗೊಂಡು ಶುಭಾರಂಭದ ಸಂಭ್ರಮದಲ್ಲಿದ್ದು, ಗ್ರಾಹಕರಿಗೆ ಬಂಪರ್ ಆಫರ್ ಘೋಷಿಸಿದೆ.

ಏನಿದು ಆಫರ್?
ಶುಭಾರಂಭದ ಪ್ರಯುಕ್ತ ಸೆ.21ರಂದು ಆಲು ಬನ್, ಪಫ್ಸ್, ಮಸಾಲ ಬನ್, ಸ್ಯಾಂಡ್ವಿಚ್, ಬರ್ಗರ್, ವೆಜ್ ಪಫ್ಸ್, ಕ್ರೀಂ ಬನ್, ಜಾಂ ಬನ್ – ಎಲ್ಲವೂ ಕೇವಲ 10 ರೂಪಾಯಿಗೆ ಲಭ್ಯವಾಗಲಿದೆ.

ಶುಚಿ-ರುಚಿಯ ಖಾರ, ಸಿಹಿ ತಿಂಡಿಗಳಿಗೆ ಹೆಸರುವಾಸಿಯಾದ ಬೇಕರಿಗೆ ಒಮ್ಮೆ ಭೇಟಿ ನೀಡಿ, 20 ವರ್ಷಗಳ ವಿಶ್ವಾಸದ ರುಚಿಯನ್ನು ಸವಿಯಿರಿ ಎಂದು ಮಾಲಕರು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9449102387 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here