






ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗುತ್ತು ಮನೆತನದವರಿಂದ ವರ್ಷಂಪ್ರತಿ ನಡೆಸಿಕೊಂಡು ಬರುವ ಶ್ರೀ ಜಟಾಧಾರಿ ದೈವದ ಮಹಿಮೆ ಸೆ.19 ರಂದು ನಡೆಯಲಿದೆ.


ರಾತ್ರಿ ಶ್ರೀದೇವರಿಗೆ ಸೋಮವಾರ ಪೂಜೆ ನಡೆದು, ಶ್ರೀ ದೈವದ ಭಂಡಾರ ತೆಗೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ. ಬಳಿಕ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಸದಸ್ಯರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ರಾತ್ರಿ ಗಂ.1 ಕ್ಕೆ ಶ್ರೀ ಜಟಾಧಾರಿ ದೈವದ ಮಹಿಮೆ ನೆರವೇರಲಿದೆ. ಇದರ ಅಂಗವಾಗಿ ಸಂಜೆ ಆರ್ಟ್ ಆಫ್ ಲೀವಿಂಗ್ ಹಿರಿಯ ಗುರು ಸೂರ್ಯ ಪಾದಾಜಿಯವರ ಶಿಷ್ಯವೃಂದದವರಿಂದ ಭಜನಾ ಸತ್ಸಂಗ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು ತಿಳಿಸಿದ್ದಾರೆ.













