ಕರ್ನಾಟಕ ಗಮಕ ಕಲಾ ಪರಿಷತ್ ವತಿಯಿಂದ ಮನೆ ಮನೆ ಗಮಕ ಕಾರ್ಯಕ್ರಮ

0

ಪುತ್ತೂರು: ಕರ್ನಾಟಕ ಗಮಕ ಕಲಾ ಪರಿಷತ್ತು (ರಿ) ಬೆಂಗಳೂರು, ದ.ಕ. ಜಿಲ್ಲೆ, ಪುತ್ತೂರು ತಾಲೂಕು ಘಟಕದ ವತಿಯಿಂದ ಮನೆ ಮನೆ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮವು ಸೆ.20ರಂದು ಕಲ್ಲಾರೆಯ ಸಾಮೆತ್ತಡ್ಕದ ‘ವೃಂದಾವನ’ದಲ್ಲಿ ನಡೆಯಿತು.

ಘಟಕದ ಉಪಕಾರ್ಯದರ್ಶಿ ಸುಮನಾ ರಾವ್ ಮತ್ತು ಡಾ. ಪ್ರಶಾಂತ ರಾವ್ ದಂಪತಿಯ ಸ್ವಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಭಾರತದ ವಿರಾಟಪರ್ವದ ಆಯ್ದ ‘ಕೀಚಕವಧೆ’ ಕಥಾಭಾಗವನ್ನು ಪ್ರಸ್ತುತಪಡಿಸಲಾಯಿತು. ಗಮಕಿ ಜಯಂತಿ ಹೆಬ್ಬಾರ್ ವಾಚಿಸಿದರು, ಶುಭಾ ಸಿ. ಅಡಿಗ ವ್ಯಾಖ್ಯಾನಿಸಿದರು. ಘಟಕದ ಅಧ್ಯಕ್ಷ ಪ್ರೊ. ವೇದವ್ಯಾಸ ರಾಮಕುಂಜ ಅವರು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕಲಾವಿದರಿಗೆ ಶಾಲು ಹೊದಿಸಿ ಗೌರವಿಸಿದರು. ಪ್ರಧಾನ ಕಾರ್ಯದರ್ಶಿ ಶಂಕರಿ ಶರ್ಮ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸುಮನಾ ರಾವ್ ವಂದಿಸಿದರು. ಕುಟುಂಬ ಸದಸ್ಯರು, ಬಂಧುಗಳು, ಕಲಾಸಕ್ತರು ಉಪಸ್ಥಿತರಿದ್ದು, ಅಚ್ಚುಕಟ್ಟಾಗಿ ನಡೆದ ಗಮಕ ಕಾರ್ಯಕ್ರಮ ಕಲಾಪ್ರಿಯರ ಮೆಚ್ಚುಗೆಗೆ ಪಾತ್ರವಾಯಿತು.

LEAVE A REPLY

Please enter your comment!
Please enter your name here