







ಪುತ್ತೂರು : ಸಂಪ್ಯದಲ್ಲಿ 2019ರ ಸೆ.3ರಂದು ಗಣೇಶೋತ್ಸವದ ಪೆಂಡಾಲ್‌ನಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಕಾರ್ತಿಕ್ ಸುವರ್ಣ ಮೇರ್ಲ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಯಲ್ಲಿದ್ದ ಆರೋಪಿಗಳಿಬ್ಬರ ಆರೋಪ ಸಾಬೀತಾಗಿದ್ದು, ಸೆ.22ರಂದು ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಲಿದೆ.


ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯ ಆರೋಪಿಗಳಾದ ಕಿರಣ್ ಮತ್ತು ಪ್ರೀತೇಶ್ ಅವರ ಮೇಲಿನ ಆರೋಪ ಸಾಬೀತಾಗಿದೆ. ಅರೋಪಿಗಳಿಗೆ ಶಿಕ್ಷೆ ಪ್ರಕಟವನ್ನು ಸೆ.22ರಂದು ನೀಡಲಾಗುವುದು. ಸರಕಾರಿ ಅಭಿಯೋಜಕಿ ಜಯಂತಿ ಸತೀಶ್ ಭಟ್ ಸರಕಾರದ ಪರ ವಾದಿಸಿದರು.



ಘಟನೆಯ ಹಿನ್ನೆಲೆ:
ಸಂಪ್ಯದಲ್ಲಿ ನಡೆಯುತ್ತಿದ್ದ ಗಣೇಶೋತ್ಸವದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ತಿಕ್ ಮೇರ್ಲ ಅವರ ಮೇಲೆ ದಾಳಿ ನಡೆಸಲಾಗಿತ್ತು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಪೊಲೀಸರು ಆರ್ಯಾಪು ಮೂಲದ ಸಹೋದರರಾದ ಚರಣ್‌ರಾಜ್ ಮತ್ತು ಕಿರಣ್ ಮತ್ತು ಪ್ರೀತೇಶ್ ಸೇರಿದಂತೆ ಆರೋಪಿಗಳನ್ನು ಬಂಧಿಸಿದ್ದರು. 2022ರಲ್ಲಿ ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ಪ್ರಮುಖ ಆರೋಪಿ ಚರಣ್‌ರಾಜ್ ರನ್ನು 2022ರ ಜೂ4ರಂದು ಪೆರ್ಲಂಪಾಡಿಯಲ್ಲಿ ಕಾರ್ತಿಕ್ ಮೇರ್ಲ ಕೊಲೆಗೆ ಪ್ರತೀಕಾರವಾಗಿ ಮತ್ತೊಂದು ತಂಡವು ತಲ್ವಾರ್‌ನಿಂದ ಹತ್ಯೆ ಮಾಡಿತ್ತು.










