ಶಿಕ್ಷಕರ ಸಹಕಾರ ಸಂಘ ಪುತ್ತೂರು ವಾರ್ಷಿಕ ಮಹಾಸಭೆ : ರೂ.8.49 ಕೋಟಿ ವ್ಯವಹಾರ | 12 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

0

ಪುತ್ತೂರು: ಎಪಿಎಂಸಿ ರಸ್ತೆ ಸಿಟಿ ಆಸ್ಪತ್ರೆ ಬಳಿಯ ಡಾಯಸ್ ಕಾಂಪ್ಲೆಕ್ಸ್ನ ಪ್ರಥಮ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಶಿಕ್ಷಕರ ಸಹಕಾರ ಸಂಘ ನಿಯಮಿತ ಪುತ್ತೂರು ಇದರ ವಾರ್ಷಿಕ ಮಹಾಸಭೆಯು ಸೆ.20 ರಂದು ಪೂರ್ವಾಹ್ನ ಜರಗಿತು.


ಸಂಘದ ಅಧ್ಯಕ್ಷರಾಗಿರುವ ಮಾಮಚ್ಚನ್ ಎಂ.ರವರು ಮಾತನಾಡಿ, ವರದಿ ವರ್ಷದಲ್ಲಿ 348 ಎ' ಸಾಲಿನ ಸದಸ್ಯರಿದ್ದು 22 ಸದಸ್ಯರು ಸೇರ್ಪಡೆಗೊಂಡು ವರ್ಷದ ಕೊನೆಗೆ 370 ಮಂದಿ ಸದಸ್ಯರಿರುತ್ತಾರೆ. ವರದಿ ಸಾಲಿನಲ್ಲಿ 3 ಸಿ’ ತರಗತಿಯ ಸದಸ್ಯರಿದ್ದು ಈರ್ವರು ಸದಸ್ಯರು ಸೇರ್ಪಡೆಗೊಂಡು ಪ್ರಸ್ತುತ ಐದು ಮಂದಿ ಸದಸ್ಯರಿದ್ದಾರೆ. ವರ್ಷದ ಆರಂಭದಲ್ಲಿ ರೂ.7,68,000 `ಎ’ ತರಗತಿ ಸದಸ್ಯರ ಪಾಲು ಬಂಡವಾಳವಿದ್ದು, ವರದಿ ಸಾಲಿನಲ್ಲಿ ರೂ.2,65,500 ಜಮೆ ಬಂದು ಪ್ರಸಕ್ತ ಸಾಲಿನಲ್ಲಿ ರೂ.10,25,000 ಪಾಲು ಬಂಡವಾಳವಿದೆ ಎಂದರು.


ರೂ.8,49 ಕೋಟಿ ವ್ಯವಹಾರ:
ಸಂಘದಲ್ಲಿ ಉಳಿತಾಯ ಖಾತೆ, ನಿರಖು ಠೇವಣಿ, ಆವರ್ತ ಠೇವಣಿ, ನಿತ್ಯ ನಿಧಿ ಠೇವಣಿ, ಭದ್ರತಾ ಠೇವಣಿ ಇದ್ದು ಸಂಘದ ಸದಸ್ಯರಿಗೆ ನಿರಖು ಟೇವಣಿ ಸಾಲ, ಚಿನ್ನಾಭರಣ ಸಾಲ, ತುರ್ತು ಸಾಲ, ದೀರ್ಘಾವಧಿ ಸಾಲ, ನಿತ್ಯನಿಧಿ ಠೇವಣಿ ಸಾಲ ನೀಡುತ್ತಿದೆ. ವರದಿ ವರ್ಷದಲ್ಲಿ ಸಂಘದ ವ್ಯವಹಾರವು ರೂ.8,49,05,679.75 ಆಗಿದ್ದು ಇದು ಕಳೆದ ವರ್ಷದ ವ್ಯವಹಾರಕ್ಕಿಂತ ಅಧಿಕವಾಗಿ ಎಂದ ಸಂಘದ ಅಧ್ಯಕ್ಷ ಮಾಮಚ್ಚನ್ ಎಂ.ರವರು ಹೇಳಿದರು.


ಸದಸ್ಯರ ಮಕ್ಕಳ ಪ್ರತಿಭೆಗೆ ಅಭಿನಂದನೆ:
2025-26ರ ಶೈಕ್ಷಣಿಕ ಸಾಲಿನಲ್ಲಿ ಎಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಯಿತು. ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕುಂಬ್ರ ಸರಕಾರಿ ಶಾಲೆಯ ಅಕ್ಷರ್ ಕೆ, ಸರ್ವೆ ಸರಕಾರಿ ಶಾಲೆಯ ವೈಷ್ಣವಿ ಎನ್.ರಾವ್, ಕೆಪಿಎಸ್ ಕುಂಬ್ರ ಶಾಲೆಯ ನಿಹಾನಿ ಮುತ್ಲಾಜೆ, ಕೆಪಿಎಸ್ ಕೆಯ್ಯೂರು ಶಾಲೆಯ ಸತ್ಯಕಿ ಎಂ.ಹೆಬ್ಬಾರ್, ವರುಣ್ ಎಂ.ವಿ, ಕೆಮ್ಮಾಯಿ ಕೃಷ್ಣನಗರ ಶಾಲೆಯ ಭವಿಷ್ಯ ಪಿ.ಎಂ, ಕೆಪಿಎಸ್ ಕುಂಬ್ರ ಶಾಲೆಯ ಮುಹಮ್ಮದ್ ನಜೀಬ್ ಅನ್ವರ್, ಸಂಜಯನಗರ ಶಾಲೆಯ ನಿಲಿಷ್ಕಾ ಕೆ, ಕೆಮ್ಮಿಂಜೆ ಶಾಲೆಯ ಸಾನ್ವಿ ಪಿ, ಮುಂಡೂರು ಶಾಲೆಯ ಕೆ.ನಿಹಾಲ್ ರೈ, ಮಣಿಕ್ಕರ ಶಾಲೆಯ ಶಾರ್ವರಿ ಆರ್.ಎಸ್, ಸರ್ವೆ ಸರಕಾರಿ ಶಾಲೆಯ ಶಿಫಾಲಿ ರೈ ಪಿ, ಇನ್ಫಂಟ್ ಜೀಸಸ್ ಶಾಲೆಯ ಸ್ನೇಹಲ್ ಲಿನೋರಾ ಲೂವಿಸ್, ಕೆಪಿಎಸ್ ಕೆಯ್ಯೂರು ಶಾಲೆಯ ಸೃಷ್ಟಿ ಎಸ್.ಪಿರವರುಗಳನ್ನು ಅಭಿನಂದಿಸಲಾಯಿತು.


ಸೇವಾ ಬದ್ಧತೆಯಿದ್ದಾಗ ಬ್ಯಾಂಕ್ ಪ್ರಗತಿ-ಸುರೇಶ್ ಡಿ:
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಡಿ’ರವರು ಮಾತನಾಡಿ, ಶಿಕ್ಷಕರ ಸಹಕಾರ ಸಂಘವನ್ನು ಹುಟ್ಟು ಹಾಕಿದರೆ ಸಾಲದು, ಅದರಲ್ಲಿ ಶಿಕ್ಷಕರು ತಮ್ಮ ಠೇವಣಿಯನ್ನು ತೊಡಗಿಸಿಕೊಳ್ಳಬೇಕು, ಸಾಲ ಪಡೆದಲ್ಲಿ ಕ್ಲಪ್ತ ಸಮಯದಲ್ಲಿ ಅದರ ಮರುಪಾವತಿ ಆಗಬೇಕು. ಬ್ಯಾಂಕ್ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಕರಲ್ಲಿ ಸೇವಾ ಬದ್ಧತೆ ಇದ್ದಾಗ ಮಾತ್ರ ಸಾಧ್ಯವಾಗುತ್ತದೆ ಎಂದರು.


ಸAಘದ ನಿರ್ದೇಶಕರಾದ ರಾಜಶೇಖರ ಎಂ, ಶ್ರೀಕಾಂತ್ ನಾಯ್ಕ ಎಂ, ಮೋನಪ್ಪ ಪಟ್ಟೆ, ಶ್ರೀಮತಿ ಸುಮತಿ ಎ.ಆರ್, ಶ್ರೀಮತಿ ಸ್ಮಿತಾಶ್ರೀ, ಶ್ರೀಮತಿ ಸುನೀಲ, ಶ್ರೀಮತಿ ಮೋಲಿ ಫೆರ್ನಾಂಡೀಸ್ ಉಪಸ್ಥಿತರಿದ್ದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಿಜೋ ಜೇಕಬ್, ಸಿಬ್ಬಂದಿ ಶ್ವೇತಾರವರು ಲೆಕ್ಕಪರಿಶೋಧನಾ ವರದಿ, ಲೆಕ್ಕಪರಿಶೋಧನಾ ವರದಿ ಬಿಡುಗಡೆ ಪತ್ರ, ಜಮಾ ಖರ್ಚು ಪತ್ರಿಕೆ, ಆಸ್ತಿ-ಜವಾಬ್ದಾರಿ ತಖ್ತೆ, ಲೆಕ್ಕ ಪರಿಶೋಧನಾ ವರ್ಗೀಕರಣ ತಖ್ತೆ ಇತ್ಯಾದಿ ಓದಿದರು. ಸಿಬ್ಬಂದಿ ಸ್ವಸ್ತಿಕಾ ನಾಯಕ್ ಪ್ರಾರ್ಥಿಸಿದರು. ಅಧ್ಯಕ್ಷ ಮಾಮಚ್ಚನ್ ಎಂ ಸ್ವಾಗತಿಸಿ, ಉಪಾಧ್ಯಕ್ಷ ಸ್ಟಾ÷್ಯನಿ ಪ್ರವೀಣ್ ಮಸ್ಕರೇನ್ಹಸ್ ವಂದಿಸಿದರು. ನಿರ್ದೇಶಕ ಅಬ್ದುಲ್ ಬಶೀರ್‌ರವರು ಪ್ರತಿಭಾ ಪುರಸ್ಕೃತರ ಹೆಸರನ್ನು ಓದಿದರು. ನಿರ್ದೇಶಕ ಗಿರೀಶ್ ಡಿ. ಕಾರ್ಯಕ್ರಮ ನಿರೂಪಿಸಿದರು.



ಸನ್ಮಾನ..
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಡಿರವರನ್ನು ಹಾಗೂ ಕೇವಲ 18 ಮಕ್ಕಳಿಂದ ಪ್ರಸ್ತುತ 200ಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನು ಹೊಂದಲು ಸಹಕಾರಿಯಾಗಿದ್ದು ಮಾತ್ರವಲ್ಲ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿರುವ ಶ್ರೀಮತಿ ಮರಿಯಾ ಅಶ್ರಫ್‌ರವರುಗಳನ್ನು ಗುರುತಿಸಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಂಘದ ಅಭಿವೃದ್ಧಿಯಲ್ಲಿ ಕೈಜೋಡಿಸಿ..
ವರದಿ ಸಾಲಿನಲ್ಲಿ ಸಂಘವು ರೂ.8.49 ಕೋಟಿ ವ್ಯವಹಾರ ನಡೆಸಿರುತ್ತದೆ. ಪುತ್ತೂರು ತಾಲೂಕು ಸಂಘದ ಕಾರ್ಯಕ್ಷೇತ್ರವಾಗಿದ್ದು ಗ್ರಾಹಕರು ಸಂಘದ ಮೇಲೆ ಅಭಿಮಾನ ಇಟ್ಟು ಠೇವಣಿ, ಸಾಲ ನೀಡುವಿಕೆ, ಸಾಲದ ಮರುಪಾವತಿ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು ಸಂಘದ ನಿರ್ದೇಶಕರ, ಸಿಬ್ಬಂದಿಗಳ ವತಿಯಿಂದ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಯಲ್ಲಿ ಪ್ರತಿಯೋರ್ವರು ಕೈಜೋಡಿಸಬೇಕು. ಸಂಘವು ಠೇವಣಿ ಮೇಲೆ ಅಧಿಕ ಬಡ್ಡಿ ನೀಡುತ್ತಿದ್ದು ಗ್ರಾಹಕರು ನಮ್ಮ ಸಂಘದಲ್ಲಿ ಠೇವಣಿ ಇರಿಸಿ ಪ್ರೋತ್ಸಾಹಿಸಬೇಕು.
ಮಾಮಚ್ಚನ್ ಎಂ, ಅಧ್ಯಕ್ಷರು, ಶಿಕ್ಷಕರ ಸಹಕಾರ ಸಂಘ ಪುತ್ತೂರು

LEAVE A REPLY

Please enter your comment!
Please enter your name here