







ಪುತ್ತೂರು: ಪುತ್ತೂರ‍್ದ ಮುತ್ತು ಟೂರಿಸ್ಟ್ ವಾಹನ ಚಾಲಕ ಮ್ಹಾಲಕ ಸಂಘದ ಮಹಾಸಭೆ, ನೂತನ ಲೋಗೋ ಬಿಡುಗಡೆ ಹಾಗೂ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ಸುಜಾತ ಹೊಟೇಲ್‌ನ ಸಭಾಂಗಣದಲ್ಲಿ ನೆರವೇರಿತು.ಸಂಘದ ಗೌರವಾಧ್ಯಕ್ಷ ಮೋನಪ್ಪ ಪೂಜಾರಿಯವರು ನೂತನ ಲೋಗೋ ಅನಾವರಣಗೊಳಿಸಿದರು. ಅಧ್ಯಕ್ಷ ಪ್ರವೀಣ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿಕ್ರಂ ಸಂಘದ ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ಜಗದೀಶ್ ಗೌಡ ಲೆಕ್ಕಪತ್ರ ಮಂಡಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ:
ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಗೌರವಾಧ್ಯಕ್ಷ ರಾಗಿ ಧನಂಜಯ, ಅಧ್ಯಕ್ಷರಾಗಿ ಯೋಗೀಶ್, ಪ್ರಧಾನ ಕಾರ್ಯದರ್ಶಿ ಯಾಗಿ ರೋಹಿತ್ ಕುಮಾರ್, ಉಪಾಧ್ಯಕ್ಷರಾಗಿ ಹಮೀದ್ ಕೆಮ್ಮಾಯಿ, ಜತೆ ಕಾರ್ಯದರ್ಶಿಯಾಗಿ ಹರೀಶ್, ಖಜಾಂಚಿಯಾಗಿ ಜಗದೀಶ ಗೌಡ, ಸಲಹೆಗಾರರಾಗಿ ಪ್ರಶಾಂತ್ ಯಾದವ್, ಮೋನಪ್ಪ ಪೂಜಾರಿ ಹಾಗೂ ವೇಣುಗೋಪಾಲ್ ಅವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷ ಯೋಗೀಶ್ ಸ್ವಾಗತಿಸಿ, ವಂದಿಸಿದರು.
















