







ಪುತ್ತೂರು: ಜೆಸಿಐ ಪುತ್ತೂರು ನಿಯೋ ಪ್ರೈಮ್ ಹಾಗೂ ಸುದಾನ ವಸತಿಯುತ ಶಾಲೆ ಜಂಟಿ ಆಯೋಜನೆಯಲ್ಲಿ ಸಾರ್ವಜನಿಕರಿಗೆ ಆತ್ಮ ವಿಶ್ವಾಸ, ಸಂವನಹನ ಕೌಶಲ್ಯ, ಭಾಷಣ ಕಲೆ ಅಭಿವೃದ್ಧಿಗಾಗಿ ಒಂದು ದಿನದ ಪರಿಣಾಮಕಾರಿ ಭಾಷಣ ಕಲೆ ಶಿಬಿರ ಸೆ.20 ಸುಧಾನ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಸುಮಾರು 20 ಜನ ಪ್ರಯೋಜನ ಪಡೆದುಕೊಂಡರು ಸಕ್ರಿಯವಾಗಿ ಭಾಗವಹಿಸಿ ಜೆಸಿಐ ರಾಷ್ಟ್ರೀಯ ತರಬೇತುದಾರರಾದ ವೇಣುಗೋಪಾಲ ಹಾಗೂ ಅನನ್ಯ ರಾವ್ ತರಬೇತಿ ನಡೆಸಿಕೊಟ್ಟರು. ಜೆಸಿಐ ನಿಯೋ ಪ್ರೈಮ್ ಆಡಳಿತ ವಿಭಾಗ ಉಪಾಧ್ಯಕ್ಷರು ಮನೋಹರ ಪಾಟಾಳಿ, ಕಾರ್ಯದರ್ಶಿ ಪ್ರಜ್ವಲ್ ಡಿ ಸೋಜಾ ಕಾರ್ಯಕ್ರಮ ನಿರ್ವಹಣೆ ಮಾಡಿದರು, ಜೆಸಿಐ ನಿಯೋ ಪ್ರೈಮ್ ಸದಸ್ಯರು ಸಹಕಾರಿಸಿದರು.















