ದರ್ಬೆತ್ತಡ್ಕ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಎತ್ತರದ ಗೋಪುರ ನಿರ್ಮಾಣ” ಸ್ಪರ್ಧೆಯಲ್ಲಿ ಪ್ರಥಮ

0

ಬಡಗನ್ನೂರು : ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ರವರ ಜನ್ಮ ದಿನಾಚರಣೆಯ ಪ್ರಯುಕ್ತ ಅಸೋಸಿಯೇಷನ್ ಆಫ್ ಕಣ್ಸಲ್ಟಿಂಗ್ ಸಿವಿಲ್ ಇಂಜಿನಿಯರ್, ಪುತ್ತೂರು ಸೆಂಟರ್ ಇವರು ಆಯೋಜಿಸಿದ “ಎತ್ತರದ ಗೋಪುರ ನಿರ್ಮಾಣ” ಸ್ಪರ್ಧೆಯಲ್ಲಿ ದರ್ಬೆತ್ತಡ್ಕ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ 6 ನೇ ತರಗತಿ ವಿದ್ಯಾರ್ಥಿಗಳಾದ ಶ್ರೀಶ ಕುಮಾರ್ ಬಿ ಹಾಗೂ ಆರುಶ್ ಜಿ ಕೆ ಪ್ರಥಮ ಸ್ಥಾನ ಪಡೆದು ನಗದು, ಪಾರಿತೋಷಕ, ಪ್ರಮಾಣ ಪತ್ರ ಹಾಗೂ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ.

 ಶ್ರೀಶ ಕುಮಾರ್ ಬಿ ರವರು ಅರಿಯಡ್ಕ ಗ್ರಾಮದ ಬೈರಮೂಲೆ ತಿಮಪ್ಪ ನಾಯ್ಕ್ ಹಾಗೂ ರೇವತಿ ದಂಪತಿಗಳ ಪುತ್ರ ಮತ್ತು ಆರುಶ್ ಜಿ ಕೆ ರವರು ಅರಿಯಡ್ಕ ಗ್ರಾಮದ ಕುರಿಂಜ ಗಂಗಾಧರ ಕೆ ಹಾಗೂ ಸಹನಕುಮಾರಿ ಇವರ ಪುತ್ರ.

 ವಿದ್ಯಾರ್ಥಿಗಳ ಈ ಸಾಧನೆಯನ್ನು ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ ಶಾಲಾಭಿವೃದ್ಧಿ ಸಮಿತಿ, ಅಕ್ಷರದಾಸೋಹ ಸಿಬಂದಿಗಳು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ .

LEAVE A REPLY

Please enter your comment!
Please enter your name here