ಮಹಾಲಿಂಗೇಶ್ವರ ದೇವಸ್ಥಾನಕ್ಕೆ 6 ಟಿಪ್ಪರ್ ಕಟ್ಟಿಗೆ ಸಮರ್ಪಣೆ

0

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭಕ್ತರು 6 ಟಿಪ್ಪರ್ ಕಟ್ಟಿಗೆಯನ್ನು ಸೆ.23ರಂದು ಸಮರ್ಪಣೆ ಮಾಡಿದ್ದಾರೆ.


ದೇವಸ್ಥಾನದಲ್ಲಿ ಅನ್ನ ತಯಾರಿಸುವ ಒಲೆ ಸಹಿತ ಇತರ ಅವಶ್ಯತಕೆಗಳಿಗೆ ಕಟ್ಟಿಗೆಗಳ ಅಗತ್ಯವನ್ನು ಮನಗಂಡು ಬನ್ನೂರು ಕುಂಟ್ಯಾನ ರಾಮ್ ಪ್ರಸಾದ್ ಮಯ್ಯ, ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಾನಂದ ಜೈನರಗುರಿ, ಹಿಂದು ಸಂಘಟನೆಗಳ ಮುಖಂಡ ಮುರಳಿಕೃಷ್ಣ ಹಸಂತಡ್ಕ ಅವರು ಜೊತೆಗೂಡಿ ಕಟ್ಟಿಗೆ ಸಮರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ರಾಮ್ ಪ್ರಸಾದ್ ಮಯ್ಯ, ಜಯಾನಂದ ಜೈನರಗುರಿ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯ ಈಶ್ವರ ಬೆಡೇಕರ್, ರೋಹನ್‌ರಾಜ್, ಲೋಕೇಶ್ ಪಡ್ಡಾಯೂರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here