







ಪುತ್ತೂರು: ಓಂ ಶಿವ ಯುವ ಕೇಂದ್ರ ಶಿವನಗರ ನೆಟ್ಟಣಿಗೆ 25 ವರ್ಷಗಳಿಂದ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳೊಂದಿಗೆ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದು, 25ನೇ ವರ್ಷಾಚರಣೆ ಆಚರಿಸಲು ತೀರ್ಮಾನಿಸಲಾಗಿದೆ.


ಸೆ.19ರಂದು ನೆಟ್ಟಣಿಗೆಯಲ್ಲಿ ಯುವ ಕೇಂದ್ರದ ಅಧ್ಯಕ್ಷ ಹರ್ಷಪ್ರಸಾದ್ ರೈ ಅವರ ಅಧ್ಯಕ್ಷತೆಯಲ್ಲಿ 25ನೇ ವರ್ಷದ ಆಚರಣಾ ಸಮಿತಿ ರಚಿಸಲಾಯಿತು.



ಗೌರವಾಧ್ಯಕ್ಷರಾಗಿ ಕರುಣಾಕರ ಎಸ್ ಸುಂಕದಕಟ್ಟೆ (ನಿವೃತ್ತ ಯೋಧ, Indian Army), ಅಧ್ಯಕ್ಷರಾಗಿ ಜಯರಾಜ್ ರೈ ಎಡಮುಗೇರು, ಪ್ರಧಾನ ಕಾರ್ಯದರ್ಶಿಯಾಗಿ ರೋಪೇಶ್ ರೈ ಮುಂಡಾಸ್, ಖಜಾಂಜಿಯಾಗಿ ಶಚಿಂದ್ರ ರೈ ನೆಟ್ಟಣಿಗೆ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಯುವ ಕೇಂದ್ರದ 25ನೇ ವರ್ಷದ ಲಾಂಛನವನ್ನು ಬೆಳ್ಳೂರು ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ರವೀಂದ್ರನಾಥ್ ಶೆಟ್ಟಿ ಶಶಿಹಿತ್ಲು ಬಿಡುಗಡೆಗೊಳಿಸಿದರು. ಸಮಾಜ ಸೇವಾ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ ವಂದಿಸಿದರು.










