ಜಿಲ್ಲಾ ಮಟ್ಟದ ದಸರಾ ಕರಾಟೆ ಸ್ಪರ್ಧೆಯಲ್ಲಿ ಇಂಡಿಯನ್ ಸ್ಕೂಲ್ ನ ಮೊಹಮ್ಮದ್ ಸಹಲ್ ಸುಲೈಮಾನ್ ದ್ವಿತೀಯ ಸ್ಥಾನ

0

ಉಪ್ಪಿನಂಗಡಿ: ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕರಾಟೆ ಸ್ಪರ್ಧೆಯಲ್ಲಿ ಇಂಡಿಯನ್ ಸ್ಕೂಲ್ ಉಪ್ಪಿನಂಗಡಿಯ 9ನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ಸಹಲ್ ಸುಲೈಮಾನ್ ಅವರು ದ್ವಿತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.


ಈ ಸಾಧನೆಯೊಂದಿಗೆ ಅವರು ಚಿಕ್ಕಮಗಳೂರಿನಲ್ಲಿ ನಡೆಯಲಿರುವ ವಿಭಾಗ ಮಟ್ಟದ (Division Level) ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದು, ತರಬೇತಿ ನೀಡಿದ ಕರಾಟೆ ಕೋಚ್ ಶಿಹಾಬ್ ಟಿ. ಅವರಿಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here