







ಪುತ್ತೂರು: ನೆ.ಮುಡ್ನೂರು ಗ್ರಾ.ಪಂನಲ್ಲಿ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿ ವರ್ಗಾವಣೆಯಾಗುತ್ತಿರುವ ಅಭಿವೃದ್ಧಿ ಅಧಿಕಾರಿ ಎ ಕೆ ಸುಬ್ಬಯ್ಯ ಅವರನ್ನು ಮಧುರಾ ಇಂಟರ್ನ್ಯಾಷನಲ್ ಸ್ಕೂಲ್ ನಿರ್ದೇಶಕರಾದ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಅವರ ನೇತೃತ್ವದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.



ಗ್ರಾ.ಪಂ ಆಡಳಿತಾಧಿಕಾರಿ ರಘು , ಗ್ರಾ.ಪಂ ಮಾಜಿ ಉಪಾಧ್ಯಕ್ಷರುಗಳಾದ ಶ್ರೀರಾಮ್ ಪಕ್ಕಳ, ರಾಮ ಮೇನಾಲ, ಕಾವು ವಿಎಸ್‌ಎಸ್ ಬ್ಯಾಂಕ್‌ನ ಮಾಜಿ ಉಪಾಧ್ಯಕ್ಷ ಪ್ರವೀಣ್ ಕುಮಾರ್ ರೈ ಮೇನಾಲ ಉಪಸ್ಥಿತರಿದ್ದರು. ಈ ಹಿಂದೆ ಗ್ರಾ.ಪಂ ಉದ್ಯೋಗಿಯಾಗಿದ್ದು ನಿವೃತ್ತಿ ಹೊಂದಿದ್ದ ಮಲ್ಲೇಶ್ ಹಾಗೂ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಭಾಗವಾಗಿ ಕಳೆದ 9 ತಿಂಗಳುಗಳಿಂದ ನಿರಂತರ ಸೇವೆ ನೀಡಿದ ಬಿಎಲ್‌ಓಗಳನ್ನು ಹಾಗೂ ಗ್ರಾಮ ಆಡಳಿತಾಧಿಕಾರಿಯಾಗಿ ಮತ್ತು ಸಹಾಯಕರಾಗಿ ಸೇವೆಯಲ್ಲಿರುವವರನ್ನು ಕೂಡ ಶಾಲು ಹೊದಿಸಿ ಗೌರವಿಸಲಾಯಿತು.




ಗ್ರಾ.ಪಂ ಸಿಬ್ಬಂದಿಗಳು, ಗ್ರಾಮಸ್ಥರು ರಾಮ ಮೇನಾಲ ಸ್ವಾಗತಿಸಿದರು. ಶೀನಪ್ಪ ಎಂ ವಂದಿಸಿದರು.










