ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಕ್ರೀಡಾಕೂಟ : ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಗೆ ಹಲವು ಪ್ರಶಸ್ತಿ

0

ಬೆಟ್ಟಂಪಾಡಿ: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಆಶ್ರಯದಲ್ಲಿ ಸರಕಾರಿ ಪ್ರೌಢಶಾಲೆ ನೆಟ್ಟಣಿಗೆ ಮೂಡ್ನೂರುನಲ್ಲಿ ಸೆ.21ರಂದು ನಡೆದ ಪುತ್ತೂರು ಗ್ರಾಮಾಂತರ ವಲಯ ಮಟ್ಟದ 14/17ರ ವಯೋಮಾನದ ಕ್ರೀಡಾಕೂಟದಲ್ಲಿ ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

9ನೇ ತರಗತಿಯ ಅಬ್ದುಲ್ ಅಹದ್ ಪಿ. ಅವರು 400 ಮೀ. ಓಟ, ಉದ್ದ ಜಿಗಿತ ಹಾಗೂ ಎತ್ತರ ಜಿಗಿತದಲ್ಲಿ ಪದಕ ಪಡೆದರೆ, ಮೊಹಮ್ಮದ್ ಉಫೈಫ್ ಚಕ್ರ ಎಸೆತ ಮತ್ತು ಗುಂಡು ಎಸೆತದಲ್ಲಿ ಪ್ರಶಸ್ತಿ ಪಡೆದಿದ್ದಾರೆ. 8ನೇ ತರಗತಿಯ ಮೊಹಮ್ಮದ್ ಆಶಿಕ್ ಜಾವಲಿನ್ ಎಸೆತದಲ್ಲಿ ಪದಕ ಪಡೆದಿದ್ದಾರೆ. ಒಟ್ಟು 6 ಪದಕಗಳನ್ನು ಪಡೆದು ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಪಿ. ತರಬೇತಿ ನೀಡಿದ್ದು, ಶಿಕ್ಷಕ ರಾಧಾಕೃಷ್ಣ ಕೋಡಿ ತಂಡದ ವ್ಯವಸ್ಥಾಪಕರಾಗಿ ಸಹಕರಿಸಿದ್ದಾರೆ ಎಂದು ಮುಖ್ಯಗುರುಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here