







ಕೆಯ್ಯೂರು: ಪುತ್ತೂರು ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ದ.ಕ.ಜಿಲ್ಲಾ ಮಟ್ಟದ 17ರ ವಯೋಮಿತಿಯ ಬಾಲಕರ ವಿಭಾಗದ ಕ್ರಿಕೆಟ್ ಪಂದ್ಯಾಟದ ಫೈನಲ್ ಪಂದ್ಯದಲ್ಲಿ ಪುತ್ತೂರು ತಾಲೂಕು ತಂಡವನ್ನು ಪ್ರತಿನಿಧಿಸಿದ್ದ ಕೆ.ಎಸ್.ಸಾನ್ವಿತ್ ಪೂಜಾರಿ ಕಣಿಯೂರು ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.
ಫೈನಲ್ ಪಂದ್ಯ ಪುತ್ತೂರು ತಾಲೂಕು ಪ್ರತಿನಿಧಿಸಿದ್ದ ಸುದಾನ ಶಾಲಾ ತಂಡ ಮತ್ತು ಮಂಗಳೂರು ಉತ್ತರ ತಾಲೂಕು ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಪುತ್ತೂರು ತಾಲೂಕು ಪ್ರತಿನಿಧಿಸಿದ್ದ ಸುದಾನ ಶಾಲಾ ತಂಡ ಪ್ರಥಮ ಸ್ಥಾನ ಪಡೆದುಕೊಂಡು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಗೊಂಡಿದೆ. ಈ ತಂಡದಲ್ಲಿದ್ದ ಕೆ.ಎಸ್.ಸಾನ್ವಿತ್ ಪೂಜಾರಿ ಕಣಿಯಾರು ಅವರು ಫೈನಲ್ ಪಂದ್ಯದಲ್ಲಿ 26 ಎಸೆತದಲ್ಲಿ 47 ರನ್ ಗಳಿಸಿ ಬ್ಯಾಟಿಂಗ್ನಲ್ಲಿ ಮಿಂಚಿ ಉತ್ತಮ ದಾಂಡಿಗ ಪ್ರಶಸ್ತಿ ಪಡೆದುಕೊಂಡರು. ಅದೇ ರೀತಿ ಬೌಲಿಂಗ್ನಲ್ಲೂ ಮಿಂಚಿ 1 ವಿಕೆಟ್ ಪಡೆದುಕೊಂಡರು.
ಈತ ಕೆಯ್ಯೂರು ಗ್ರಾಮದ ಕಣಿಯಾರು ದಿ| ಸುಬ್ಬಣ್ಣ ಪೂಜಾರಿಯವರ ಪುತ್ರಿ ಆಶಾ ದಿನೇಶ್ ಕೆ.ಎಸ್.ಅವರ ಪುತ್ರ. ಫಿಲೋಮಿನಾ ಕಾಲೇಜಿನಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಪಿಂಟೋ, ನರೇಶ್, ಸುದಾನ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಅವರು ತರಬೇತಿ ನೀಡಿದ್ದರು.












