







ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಸುದೀರ್ಘ 36 ವರ್ಷ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ಅ.31ರಂದು ನಿವೃತ್ತಿಯಾಗಲಿರುವ ಚಂದ್ರಶೇಖರ ಕೆ.ಅವರಿಗೆ ಅವರ ಶಿಷ್ಯವೃಂದದಿಂದ ಅ.25ರಂದು ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ನಡೆಯುವ ‘ ಚಂದ್ರಾಭಿನಂದನಾ, ಗುರುಗಳಿಗೊಂದು ಕೃತಜ್ಞತಾ ನಮನ ‘ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸೆ.27ರಂದು ಬೆಳಗ್ಗೆ ರಾಮಕುಂಜ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್ ಕೊಯಿಲ, ಚಂದ್ರಶೇಖರ ಕೆ.ಅವರ ಶಿಷ್ಯಂದಿರೂ ಆದ ಕಡಬ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಾಂತರಾಮ ಓಡ್ಲ, ಫಲೂಲುದ್ದೀನ್ ಹೇಂತಾರ್ ಅವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಶುಭಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಚಂದ್ರಾಭಿನಂದನಾ ಸಮಿತಿ ಅಧ್ಯಕ್ಷ ನೀರಜ್‌ಕುಮಾರ್ ರೈ ಅರುವಾರ ಬಾಳಿಕೆ ಕೊಯಿಲ ಅವರು ಕಾರ್ಯಕ್ರಮದ ರೂಪುರೇಷೆ ಕುರಿತು ಮಾಹಿತಿ ನೀಡಿದರು. ಕೋಶಾಧಿಕಾರಿ ಲೋಕನಾಥ ರೈ ಅವರು ಕಾರ್ಯಕ್ರಮದ ಮಾಹಿತಿ ನೀಡಿದರು.
ಕಾರ್ಯದರ್ಶಿ ಹರೀಶ್ ಬಿ., ಗಣೇಶ್ ಕಟ್ಟಪುಣಿ, ಕರುಣಾಕರ ಯು., ಸೋಮಸುಂದರ ಶೆಟ್ಟಿ, ಕೃಷ್ಣಮೂರ್ತಿ ಕೆಮ್ಮಾರ, ಫಾರೂಕ್ ಅಮೈ, ಸದಾಶಿವ ಶೆಟ್ಟಿ ಮಾರಂಗ, ಕೇಶವ ಕೆ., ಗುರುಪ್ರಸಾದ್ ರೈ ಕೇವಳ, ಹರಿಪ್ರಸಾದ್ ಜಿ., ಅಶ್ವತ್ ಎಸ್., ಮಹೇಶ್ ಬಿ., ಶರತ್ ಯು., ಗೋಪಿನಾಥ ವಿ., ಬಾಲಕೃಷ್ಣ ನಾಯ್ಕ್ ಎ.ಸಿ., ದಿನೇಶ್ ಡಿ., ಗುರುಕಿರಣ್ ಶೆಟ್ಟಿ ಬಿ., ಉದಿತ್ ಬಿ.ಎಂ., ನಾಗರಾಜ್ ಎಸ್., ನವೀನ ವಿ., ರಿಚಾರ್ಡ್ ಡಿ.ಸೋಜ ಮತ್ತಿತರರು ಉಪಸ್ಥಿತರಿದ್ದರು.












