ಪುತ್ತೂರು ನಗರ ಮಂಡಲ ಮಹಿಳಾ ಮೋರ್ಚಾ ವತಿಯಿಂದ “ಸೇವಾ ಸಂಕಲ್ಪ”ದಡಿ ಗೌರವಾರ್ಪಣೆ

0

ಪುತ್ತೂರು: ಪುತ್ತೂರು ನಗರ ಮಂಡಲ ಮಹಿಳಾ ಮೋರ್ಚಾ ವತಿಯಿಂದ “ಸೇವಾ ಸಂಕಲ್ಪ” ಕಾರ್ಯಕ್ರಮದಡಿ ಪ್ರಧಾನಿ ನರೇಂದ್ರ ಮೋದಿಯವರ 25 ವರ್ಷಗಳ ಸಾರ್ವಜನಿಕ ಸೇವೆ ಮತ್ತು ಸಮರ್ಪಣೆಯ ಸ್ಮರಣಾರ್ಥ, ಬೊಳುವಾರು ಶಕ್ತಿಕೇಂದ್ರದ ರಕ್ತೇಶ್ವರಿ ನಗರ ಅಂಗನವಾಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿ ರಮಾ ರೈ, ಸಹಾಯಕಿ ಮೀನಾಕ್ಷಿ ಹಾಗೂ ಆಶಾ ಕಾರ್ಯಕರ್ತೆ ಭವ್ಯರವರನ್ನು ಗೌರವಿಸುವ ಕಾರ್ಯಕ್ರಮ ನಡೆಯಿತು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿದ್ಯಾ ಆರ್‌. ಗೌರಿ ಅವರು ಮಾತನಾಡಿ, ಅಂಗನವಾಡಿಗಳು ಒಂದು ಬೂತ್‌ನ ಶಕ್ತಿ ಕೇಂದ್ರವಾಗಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವಿವರಿಸಿ, ಎಸ್‌ಐಆರ್‌ (SIR) ಕಾರ್ಯದಲ್ಲಿ ಶಿಕ್ಷಕಿ ಹಾಗೂ ಸಹಾಯಕಿಯರು ನೀಡಿದ ಸಹಕಾರ ಮತ್ತು ಸೇವೆಯನ್ನು ಶ್ಲಾಘಿಸಿದರು. ಬಳಿಕ ಅಂಗನವಾಡಿ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವರ್ಣಲತಾ, ಪ್ರಧಾನ ಕಾರ್ಯದರ್ಶಿ ಆಶಾ ಭಗವಾನ್, ಕಾರ್ಯದರ್ಶಿ ಸುನಿತಾ, ಅಂಗನವಾಡಿ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here