ಪುತ್ತೂರು ಕೈಗಾರಿಕಾ ಸಂಘದ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ ಕೇಶವ ಅಮೈ, ಕಾರ್ಯದರ್ಶಿ ರೂಪೇಶ್ ನೈಾಕ್‌ ಪುನರಾಯ್ಕೆ

ಪುತ್ತೂರು: ಕೈಗಾರಿಕಾ ಸಂಘ ಪುತ್ತೂರು ಇದರ ನೂತನ ಪದಾಧಿಕಾರಿಗಳ ರಚನೆಯಾಗಿದ್ದು ಅಧ್ಯಕ್ಷರಾಗಿ ಎಸ್‌ಅರ್‌ಕೆ ಲ್ಯಾಡರ್ಸ್ ಮ್ಹಾಲಕ ಕೇಶವ ಅಮೈ, ಕಾರ್ಯದರ್ಶಿಯಾಗಿ ರೂಪೇಶ್ ನೈಾಕ್‌ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಆಕರ್ಷಣ್ ಇಂಡಸ್ಟ್ರೀಸ್‌ನ ಕೆ.ಪಿ ಮಹಮ್ಮದ್ ಸಾದಿಕ್, ಜತೆ ಕಾರ್ಯದರ್ಶಿಯಾಗಿ ಅಮ್ಚಿನಡ್ಕ ಹಾಳೆತಟ್ಟೆ ತಯಾರಿಕಾ ಘಟಕದ ಸುರೇಖಾ ಡಿ. ಶೆಟ್ಟಿ, ಖಜಾಂಚಿಯಾಗಿ ಮರೀಲ್ ಕ್ರಿಸ್ತೋಫರ್ ವೆಲ್ಡಿಂಗ್ ಇಂಡಸ್ಟ್ರೀಸ್‌ನ ಲಿಯೋ ಮಾರ್ಟಿಸ್, ಗೌರವ ಸಲಹೆಗಾರರಾಗಿ ಶಿವಶಂಕರ ಭಟ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಾಕೋಬ್ ಡಿ ಸೋಜಾ, ವಿಶ್ವಪ್ರಸಾದ್ ಸೇಡಿಯಾಪು, ವಿಜಯಲಕ್ಷ್ಮೀ ಆರ್ ಶೆಣೈ, ಪ್ರಸನ್ನ ಕುಮಾರ್ ರೈ, ರವಿರಾಜ ಭಟ್, ಪದ್ಮನಾಭ ಶೆಟ್ಟಿ, ಅಬ್ದುಲ್ ರಹಿಮಾನ್ ಯೂನಿಕ್, ಟ.ವಿ ರವೀಂದ್ರನ್, ಆಸ್ಕರ್ ಆನಂದ್ ಹಾಗೂ ಮೋಹನ್ ಕುಮಾರ್ ಬೊಳ್ಳಾಡಿ ಆಯ್ಕೆಯಾಗಿದ್ದಾರೆ.

ಸೆ.26ರಂದು ಮುಕ್ರಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here