







ಪುತ್ತೂರು:ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ಸವಣೂರು ಬಸದಿ ಮೈದಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯಕ್ತ ಮೊಸರು ಕುಡಿಕೆ ಉತ್ಸವ ನಡೆಯಿತು. ಉದ್ಘಾಟನೆಯನ್ನು ವಿಜಯ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಪಿ. ಡಿ. ಕೃಷ್ಣ ಕುಮಾರ್ ದೇವಸ್ಯ ನೆರವೇರಿಸಿದರು.



ವೇದಿಕೆಯಲ್ಲಿ ಪ್ರಮುಖರಾದ ಶತ್ರುಂಜಯ ಅರಿಗ ಬೆಳಂದೂರುಗುತ್ತು, ಗಿರಿಶಂಕರ್ ಸುಲಾಯ, ರಾಕೇಶ್ ರೈ ಕೆಡೆಂಜಿ, ತಾರಾನಾಥ್ ಕಾಯರ್ಗ, ದಿನೇಶ್ ಮೆದು, ಸುರೇಶ್ ರೈ ಸೂಡಿಮುಳ್ಳು, ಮೋಹನ್ ರೈ ಕೆರೆಕ್ಕೋಡಿ, ಲಕ್ಷ್ಮೀಶ ಗಾಂಭೀರ, ರಶ್ಮಿ ಅಶ್ವಿನ್ ಶೆಟ್ಟಿ ಯತೀಶ್ ಕಾನವುಜಾಲು, ಪ್ರಭಾಕರ ಶೆಟ್ಟಿ ನಡುಬೈಲು, ಬಾಲಚಂದ್ರ ರೈ ಕೆರೆಕ್ಕೋಡಿ, ಮಹೇಶ್ ಕೆ ಸವಣೂರು, ತೀರ್ಥರಾಮ ಕೆಡೆಂಜಿ, ಸತೀಶ್ ಬಲ್ಯಾಯ, ಪ್ರಕಾಶ್ ಕುದ್ಮನಮಜಲು, ಸಚಿನ್ ಸವಣೂರು, ಕೀರ್ತನ್ ಕೋಡಿಬೈಲು, ತೇಜಸ್ ಬೇರಿಕೆ, ಗಂಗಾಧರ ಪೆರಿಯಡ್ಕ, ಅಬ್ದುಲ್ ರಝಕ್, ಧನುಷ್, ಶೈಲೇಶ್ ಭಂಡಾರಿ, ತೇಜಸ್ ಚಾಪಲ್ಲ ಪ್ರಕಾಶ್ ಮಾಲೆತ್ತಾರು, ದೀಪಕ್ ಶೆಟ್ಟಿ ಮಠ, ಕುಶಾಲಪ್ಪ ಇಡ್ಯಾಡಿ, ಕರುಣಾಕರ ದೇವಸ್ಯ ಉಪಸ್ಥಿತರಿದ್ದರು. ಯುವಕಮಂಡಲದ ಅಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ಸ್ವಾಗತಿಸಿ, ಕಾರ್ಯದರ್ಶಿ ರಾಜೇಶ್ ಇಡ್ಯಾಡಿ ವಂದಿಸಿದರು.













