







ಹಿರೇಬಂಡಾಡಿ: ಕೊಯಿಲ ಗ್ರಾಮದ ಆನೆಗುಂಡಿ ಅಂಗನವಾಡಿ ಕೇಂದ್ರಕ್ಕೆ ಸ್ಥಳೀಯರು ವಿವಿಧ ಕೊಡುಗೆಗಳನ್ನು ನೀಡಿದರು.



ಶಾಖೆಪುರ ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷೆ ರೂಪಾಹರಿಶ್ಚಂದ್ರ ಆನೆಗುಂಡಿ ಅವರು ಅಂಗನವಾಡಿಯ ದಾಸ್ತಾನು ಕೊಠಡಿಗೆ ಕಪಾಟು ತಯಾರಿಸಲು ರೂ.8 ಸಾವಿರ ದೇಣಿಗೆ ನೀಡಿದರು. ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಶಕುಂತಳಾ ಜಗದೀಶ್ ಆನೆಗುಂಡಿಯವರು ಕಪಾಟು ಕೊಡುಗೆಯಾಗಿ ನೀಡಿದರು. ಮಂಜುನಾಥ ಇಲೆಕ್ಟ್ರಿಕಲ್ಸ್ ಮಾಲಕ ದಯಾನಂದ ಪುಣ್ಕೆತ್ತಡಿ ಅವರು ಆಟಿಕೆ ಜೋಡಿಸಿಡುವ ಕಪಾಟು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಮಕ್ಕಳ ಪೋಷಕರು,ಸ್ತ್ರೀ ಶಕ್ತಿ ಸದಸ್ಯರು, ಬಾಲವಿಕಾಸ ಸಮಿತಿ ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಉಪಸ್ಥಿತರಿದ್ದರು.













