







ಪೆರಾಬೆ: ಪಿಕಪ್ ಡಿಕ್ಕಿಯಾಗಿ ಶಾಲಾ ಬಾಲಕಿ ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಕುಂತೂರು ಎಂಬಲ್ಲಿ ಸೆ.28ರಂದು ಬೆಳಗ್ಗೆ ನಡೆದಿದೆ.


ಐತ್ತೂರು ಗ್ರಾಮದ ಸಿಆರ್ಸಿ ಕಾಲೋನಿ ನಿವಾಸಿ ಯೋಗೀಶ್ವರ್ ಎಂಬವರ ಪುತ್ರಿ, ಕುಂತೂರು ಮಾರ್ ಇವಾನಿಯೋಸ್ ಇಂಗ್ಲಿಷ್ ಮೀಡಿಯಂ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಶೈನಾ (12ವ.) ಪಿಕಪ್ ಡಿಕ್ಕಿಯಾಗಿ ಗಾಯಗೊಂಡಿರುವ ಬಾಲಕಿ. ಈಕೆ ದಿನಾಲೂ ನೆಟ್ಟಣದಿಂದ ಸರಕಾರಿ ಬಸ್ಸಿನಲ್ಲಿ ಕುಂತೂರು ಶಾಲೆಗೆ ಬರುತ್ತಿದ್ದು ಸೆ.28ರಂದೂ ನೆಟ್ಟಣದಿಂದ ಬಸ್ಸಿನಲ್ಲಿ ಬಂದವರು ಕುಂತೂರಿನಲ್ಲಿ ಇಳಿದು ಅಲ್ಲಿಂದ ಅಲ್ಲೇ ಹತ್ತಿರದಲ್ಲಿರುವ ಶಾಲೆಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಪಿಕಪ್ ವಾಹನವೊಂದನ್ನು ಅದರ ಚಾಲಕ ಟಿಪ್ಪರ್ ಲಾರಿಯನ್ನು ಓವರ್ ಟೇಕ್ ಮಾಡಿಕೊಂಡು ರಸ್ತೆಯ ತೀರಾ ಬಲಬದಿಗೆ ವಿರುದ್ಧ ದಿಕ್ಕಿನಲ್ಲಿ ಬಂದು ಹಿಂದಿನಿಂದ ಬಾಲಕಿಗೆ ಡಿಕ್ಕಿ ಹೊಡೆದಿರುವುದಾಗಿದೆ. ಪಿಕಪ್ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದು ನೆಲದ ಮೇಲೆ ಬಿದಿದ್ದ ಬಾಲಕಿಯನ್ನು ಸಾರ್ವಜನಿಕರು ಉಪಚರಿಸಿ ಶಾಲೆಗೆ ಕರೆದುಕೊಂಡು ಬಂದಿದ್ದು ನಂತರ ಬಾಲಕಿಯ ತಂದೆ ಬಂದು ಶೈನಾಳನ್ನು ಕಳಾರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿರುತ್ತಾರೆ ಎಂದು ವರದಿಯಾಗಿದೆ. ಬಾಲಕಿ ತಂದೆ ಯೋಗೀಶ್ವರನ್ ಅವರು ನೀಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.



ಶೈನಾಳನ್ನು ಕಳಾರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯಾಧಿಕಾರಿಯವರು ಪ್ರಥಮ ಚಿಕಿತ್ಸೆ ನೀಡಿದ್ದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿಸಿರುತ್ತಾರೆ. ಸದ್ರಿ ಅಪಘಾತದಿಂದ ಶೈನಾಳ ಎಡಕೈಗೆ ರಕ್ತ ಗಾಯವಾಗಿರುತ್ತದೆ. ಶೈನಾಳಲ್ಲಿ ಈ ಬಗ್ಗೆ ವಿಚಾರಿಸಿದಾಗ ನಾನು ರಸ್ತೆಯ ಬಲಬದಿಯಲ್ಲಿ ಶಾಲೆಗೆ ನಡೆದುಕೊಂಡು ಹೋಗುತ್ತಿರುವಾಗ ಓರ್ವ ಪಿಕಪ್ ಚಾಲಕನು ಟಿಪ್ಪರ್ ಲಾರಿಯನ್ನು ಓವರ್ ಟೇಕ್ ಮಾಡಿಕೊಂಡು ರಸ್ತೆಯ ತೀರಾ ಬಲಬದಿಗೆ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿ ರಸ್ತೆಯ ಬಲಬದಿಯಲ್ಲಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನನಗೆ ಹಿಂದಿನಿಂದ ಡಿಕ್ಕಿ ಹೊಡೆದು ಪಿಕಪ್ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿರುವುದಾಗಿದೆ. ನಾನು ಡಿಕ್ಕಿ ಹೊಡೆದ ರಭಸಕ್ಕೆ ಅಲ್ಲೇ ನೆಲದ ಮೇಲೆ ಬಿದ್ದೆನು. ಆಗ ಸಾರ್ವಜನಿಕರು ಬಂದು ನನ್ನನ್ನು ಉಪಚರಿಸಿ ಶಾಲೆಗೆ ಕರೆದುಕೊಂಡು ಬಂದಿದ್ದು ನಂತರ ಶಾಲೆಯಿಂದ ನಿಮಗೆ ಟೀಚರ್ ರವರು ಕರೆ ಮಾಡಿ ವಿಚಾರ ತಿಳಿಸಿರುವುದಾಗಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 113/2026 ಕಲಂ 281, 125(a) BNS & ಕಲಂ 134 (a & b) IMV Act ಯಂತೆ ಪ್ರಕರಣ ದಾಖಲಾಗಿರುತ್ತದೆ.










