ಬಲ್ನಾಡು ಮಾದರಿ ಗ್ರಾಮ ಸಮಿತಿಯ ಭಜನಾ ಕಾರ್ಯಕ್ರಮದ ಪೂರ್ವಭಾವಿ ಸಭೆ

0

ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪುತ್ತೂರು ಇದರ ಮಾರ್ಗದರ್ಶನದಲ್ಲಿ ಬಲ್ನಾಡು ಮಾದರಿ ಗ್ರಾಮ ಸಮಿತಿಯ ಭಜನಾ ಕಾರ್ಯಕ್ರಮದ ಸಮಾರೋಪ ಸಮಾರಂಭದ ಪೂರ್ವಭಾವಿ ಸಭೆಯು ಬಲ್ನಾಡು ಕಟ್ಟೆ ಮನೆಯಲ್ಲಿ ಇತ್ತೀಚೆಗೆ ನಡೆಯಿತು.

ಮಾದರಿ ಗ್ರಾಮ ಸಮಿತಿಯ ಅಧ್ಯಕ್ಷ ನಾರಾಯಣ ಗೌಡ ಕುಕ್ಕುತ್ತಡಿ ಅವರು ಅಧ್ಯಕ್ಷತೆ ವಹಿಸಿದ್ದರು. ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ, ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಶ್ರೀಧರ್ ಗೌಡ ಪಾಣತ್ತಿಲ, ಒಕ್ಕಲಿಗ ಗೌಡ ಸೇವಾ ಸಂಘದ ಉಪಾಧ್ಯಕ್ಷ ಮತ್ತು ವಲಯ ಉಸ್ತುವಾರಿ ರಾಧಾಕೃಷ್ಣ ನಂದಿಲ, ಬಲ್ನಾಡು ಗ್ರಾಮ ಸಮಿತಿ ಅಧ್ಯಕ್ಷ ಮಾದವ ಗೌಡ ಕಾಂತಿಲ, ಸೂರಪ್ಪ ಗೌಡ ಕೆಮ್ಮಿಂಜೆ, ಕಟ್ಟೆಮನೆ ಕುಟುಂಬದ ಹಿರಿಯರು ಒಕ್ಕಲಿಗ ಸ್ವ ಸಹಾಯ ಸಂಘದ ಬಲ್ನಾಡು ಇದರ ಅಧ್ಯಕ್ಷೆ ಗೀತಾ ವಳಗುಡ್ಡೆ, ಮಹಿಳಾ ಸಂಘದ ಅಧ್ಯಕ್ಷೆ ಚಂದ್ರಾವತಿ ಮುದಲಾಜೆ, ಭಜನಾ ಸಂಘಟಕರಾದ ಉಮೇಶ್ ಬ್ರಹ್ಮರಕೋಡಿ, ವೆಂಕಪ್ಪ ಗೌಡ ಕೆಯ್ಯೂರು, ಮೇಲ್ವಿಚಾರಕಿ ಸುಮಲತಾ ಹಲಂಗ, ಬಲ್ನಾಡು ಕಟ್ಟೆಮನೆಯ ಯಜಮಾನ ಪರಮೇಶ್ವರ ಗೌಡ, ಬಾಲಕೃಷ್ಣ ಗೌಡ ಉಪಸ್ಥಿತರಿದ್ದರು.

ಇದೇ ಸಂದರ್ಭ ಒಕ್ಕಲಿಗ ಗೌಡ ಗ್ರಾಮ ಸಮಿತಿ, ಮಹಿಳಾ ಸಂಘ, ಯುವ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ರಾಧಾಕೃಷ್ಣ ನಂದಿಲ ಅವರ ಉಪಸ್ಥಿತಿಯಲ್ಲಿ ನಡೆಯಿತು. ಬಲ್ನಾಡು ಗ್ರಾಮ ಸಮಿತಿ ಅಧ್ಯಕ್ಷರಾಗಿ ಸೀತಾರಾಮ ಗೌಡ ಕಾಂತಿಲ, ಕಾರ್ಯದರ್ಶಿಯಾಗಿ ವಿಶ್ವನಾಥ ಗೌಡ ಕಟ್ಟೆಮನೆ, ಖಜಾಂಜಿಯಾಗಿ ಉಮೇಶ್ ಗೌಡ ಬ್ರಹ್ಮರಕೋಡಿ. ಒಕ್ಕಲಿಗ ಗೌಡ ಮಹಿಳಾ ಸಂಘದ ಅಧ್ಯಕ್ಷರಾಗಿ ಪ್ರೇಮಾ ತಿಮ್ಮಪ್ಪ ಗೌಡ, ಕಾರ್ಯದರ್ಶಿಯಾಗಿ ಪ್ರಜ್ಞಾ ಕುಕ್ಕುತ್ತಡಿ, ಖಜಾಂಜಿಯಾಗಿ ಯಕ್ಷತಾ ಮಾದ್ಯರು, ಒಕ್ಕಲಿಗ ಯುವ ಸಂಘದ ಅಧ್ಯಕ್ಷರಾಗಿ ಭವಿತ್ ಸೇನರಾಮೂಲೆ, ಕಾರ್ಯದರ್ಶಿಯಾಗಿ ಸಂದೇಶ್ ಕಾಂತಿಲ, ಖಜಾಂಜಿಯಾಗಿ ಜೀವನ್ ಕಟ್ಟೆಮನೆ ಅವರನ್ನು ಆಯ್ಕೆ ಮಾಡಲಾಯಿತು. ಗ್ರಾಮ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here