







ಪುತ್ತೂರು : ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಇದರ ವತಿಯಿಂದ ದ.ಕ ಜಿಲ್ಲೆ-2 ರ ಅಖಿಲ ಕರ್ನಾಟಕ ಜನಜಾಗೃತಿಯ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡ ವಿಶ್ವನಾಥ ರೈ ಕಲೆಂಜರವರಿಗೆ ಸೆ 30 ರಂದು ಕಡಬ ಯೋಜನಾ ಕಛೇರಿಯಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ ಎ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಇಂದು ಶೇಖರ್ ಶೆಟ್ಟಿ, ಕಡಬ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷರಾದ ಮಹೇಶ್ ಕೆ ಸವಣೂರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ವಲಯದ ವಲಯಾಧ್ಯಕ್ಷರಾದ ಕರುಣಾಕರ ಗೋಗಟೆ, ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಕಡಬ ವಲಯದ ಮೇಲ್ವಿಚಾರಕರಾದ ವಿಜೇಶ್ ಜೈನ್, ಯೋಜನೆಯ ಸಿಬ್ಬಂದಿಗಳಾದ ಸುಜಾತ, ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು.












