







ಪುತ್ತೂರು: ಮಹಿಳಾ ಮಂಡಲಗಳ ಒಕ್ಕೂಟ ಪುತ್ತೂರು ತಾಲೂಕು ಹಾಗೂ ತುಳು ಅಪ್ಪೆ ಕೂಟದ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಸೆ.30ರಂದು ನವನೀತಂ ಸಭಾಭವನದಲ್ಲಿ ಶಿಕ್ಷಕಿ ಶುಭಲತಾ ಅವರನ್ನು ಸನ್ಮಾನಿಸಲಾಯಿತು.


ಸಭೆಯ ಅಧ್ಯಕ್ಷತೆಯನ್ನು ಉಷಾ ನಾಯಕ್ ವಹಿಸಿ, ಸ್ವಾಗತಿಸಿದರು. ಪ್ರೇಮಲತಾ ರಾವ್ ಹಾಗೂ ಹರಿಣಾಕ್ಷಿ ಜೆ. ಶೆಟ್ಟಿ ಶುಭ ಹಾರೈಸಿದರು. ಸನ್ಮಾನ ಸ್ವೀಕರಿಸಿ ಶಿಕ್ಷಕಿ ಶುಭಲತಾ ಮನದಾಳದ ಮಾತುಗಳನ್ನಾಡಿದರು.



ಕಾರ್ಯಕ್ರಮದಲ್ಲಿ ಮಹಿಳಾ ಮಂಡಲಗಳ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಹಾಗೂ ತುಳು ಅಪ್ಪೆ ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.ಶಾರದಾ ಅರಸ್ ಪ್ರಾರ್ಥಿಸಿದರು, ಗೌರಿ ಬನ್ನೂರು ವಂದಿಸಿದರು, ಕಿಶೋರಿ ದುಗ್ಗಪ್ಪ ಕಾರ್ಯಕ್ರಮ ನಿರೂಪಿಸಿದರು.










