ಪುಣಚ ಸ್ನೇಹ ಸಂಗಮ ಆಟೋ ಚಾಲಕ ಮಾಲಕರ ಸಂಘದ ವತಿಯಿಂದ ಧನಸಹಾಯ

0

ಪುಣಚ: ಸ್ನೇಹ ಸಂಗಮ ಆಟೋ ಚಾಲಕ ಮಾಲಕರ ಸಂಘ ಪುಣಚ ಘಟಕದಿಂದ ಅನಾರೋಗ್ಯದಿಂದಿರುವ ಸಂಘದ ಸದಸ್ಯರಾದ ಸಂತೋಷ ನಾಯ್ಕ ಕೆಲ್ಲಾಳಿ, ಶೀನ ನಾಯ್ಕ ಸಂಕೇಶ ಹಾಗೂ ಅಪಘಾತದಿಂದ ಗಾಯಗೊಂಡಿದ್ದ ಯೋಗಿಶ್ ಬಾಳೆಕುಮೇರಿ ಅವರಿಗೆ ಬಡ ಆಟೋರಿಕ್ಷಾ ಚಾಲಕರ ತುರ್ತು ಸೇವಾ ನಿಧಿಯಿಂದ ಸಂಗ್ರಹವಾದ ಧನಸಹಾಯವನ್ನು ನೀಡಲಾಯಿತು.

ಈ ಸಂದರ್ಭ ಪುಣಚ ಘಟಕದ ಅಧ್ಯಕ್ಷ ಶ್ರೀಧರ ಗೌಡ ಗುರ್ಮೆ, ಉಪಾಧ್ಯಕ್ಷ ಕೀರ್ತಿ ಕುಮಾರ್, ಕಾರ್ಯದರ್ಶಿ ಅಬ್ದುಲ್ ಅಜೀಜ್ ಪುಣಚ ಜೊತೆ ಕಾರ್ಯದರ್ಶಿ ಆಲ್ಬರ್ಟ್ ಡಿ ಸೋಜಾ, ಕೋಶಾಧಿಕಾರಿ ಬಾಲಕೃಷ್ಣ ಮೂಡಂಬೈಲು, ಸದಸ್ಯರಾದ ಶ್ರೀನಿವಾಸ್ ಕಲ್ಲಾಜೆ, ನಾಗೇಶ್ ಕಲ್ಲಾಜೆ, ಸಿದ್ದು ಕಲ್ಲಾಜೆ, ಸಮದ್ ಕಲ್ಲಾಜೆ, ಸಂಶೀರ್ ಕಲ್ಲಾಜೆ, ವೆಂಕಪ್ಪ ಮಣಿಲ, ರಾಜೇಶ್ ಕಲ್ಲಾಜೆ, ಸುರೇಶ್ ಪೊಯ್ಯಮೂಲೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here