







ಪುತ್ತೂರು: ಒಮಾನ್ ದೇಶದ ಪ್ರಸಿದ್ಧ ‘ಒಮಾನ್ ಕರ್ನಾಟಕ ಆರಾಧನಾ ಸಮಿತಿ-ಮಸ್ಕತ್’ ಆಶ್ರಯದಲ್ಲಿ ತುಳುನಾಡಿನ ಹೆಮ್ಮೆಯ ಗಾಯಕ, ‘ತುಳುನಾಡ ಗಾನ ಗಂಧರ್ವ’ ಬಿರುದಾಂಕಿತ ಪುತ್ತೂರು ಜಗದೀಶ್ ಆಚಾರ್ಯ ಹಾಗೂ ಬಳಗದಿಂದ ಅ.2ರಂದು ಒಮಾನ್ನಲ್ಲಿ ‘ಓಂಕಾರ ನಾದಮೃತ’ ಸಂಗೀತ ಕಾರ್ಯಕ್ರಮ ನಡೆಯಲಿದೆ.


ತುಳುನಾಡಿನ ಒಟ್ಟು 7 ಮಂದಿ ನುರಿತ ಸಂಗೀತ ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿಂದೆ ‘ಒಮಾನ್ ತುಳು ವೆರ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲೂ ಜಗದೀಶ್ ಆಚಾರ್ಯ ತಂಡ ಭಾಗವಹಿಸಿ ಸಂಗೀತ ಪ್ರೇಮಿಗಳ ಮನ ಗೆದ್ದಿತ್ತು. ಅದರ ಯಶಸ್ಸಿನ ಹಿನ್ನೆಲೆಯಲ್ಲಿ ಒಮಾನ್ ಕನ್ನಡಿಗರು ಎರಡನೇ ಬಾರಿಗೆ ಅವರನ್ನು ವಿಶೇಷವಾಗಿ ಆಹ್ವಾನಿಸಿದ್ದಾರೆ.



ಈ ಸಂಗೀತ ಕಾರ್ಯಕ್ರಮ ಅ.2ರ ಶುಕ್ರವಾರ ಸಂಜೆ 6 ಗಂಟೆಗೆ ಮಸ್ಕತ್ನ ಶ್ರೀ ಕೃಷ್ಣ ದೇವಸ್ಥಾನದ ಕಮ್ಯುನಿಟಿ ಹಾಲ್ನಲ್ಲಿ ಜರುಗಲಿದೆ. ಒಮಾನ್ನಲ್ಲಿರುವ ಸಂಗೀತ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಸಮಿತಿ ಕೋರಿದೆ.










