







ನಿಡ್ಪಳ್ಳಿ: ಇಲ್ಲಿಯ ಗ್ರಾಮ ಪಂಚಾಯತಿನಲ್ಲಿ 2026-27ನೇ ಸಾಲಿನ ವಿಬಿ ಜಿ ರಾಮ್ ಜಿ ಯೋಜನೆ ಹಾಗೂ ಸ್ವಚ್ಚ ಭಾರತ್ ದಿವಸದ ಅಂಗವಾಗಿ ವಿಶೇಷ ಗ್ರಾಮಸಭೆ ಆಡಳಿತಾಧಿಕಾರಿ ಚೇತನ್ ಕುಮಾರ್ ಎಚ್.ಎನ್ ಇವರ ಅಧ್ಯಕ್ಷತೆಯಲ್ಲಿ ಅ.2 ರಂದು ನಡೆಯಿತು.


ಕಾರ್ಯಕ್ರಮದ ಆರಂಭದಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗಾಂಧಿ ಜಯಂತಿ ಆಚರಿಸಲಾಯಿತು.ನಂತರ ವಿ ಬಿ ಜಿ ರಾಮ್ ಜಿ ಯೋಜನೆಯ ಉದ್ದೇಶ ಹಾಗೂ ಅದರ ಅರಿವು ಮೂಡಿಸುವ ಬಗ್ಗೆ ಮಾತನಾಡಿದ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ 2027-28ನೇ ಸಾಲಿನಲ್ಲಿ ಯೋಜನೆಯಲ್ಲಿ ಮಾಡುವ ಕಾಮಗಾರಿಗಳಿಗಾಗಿ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.



ಕಾರ್ಯದರ್ಶಿ ಶಿವರಾಮ ಮೂಲ್ಯ ಸ್ವಚ್ಛ ಸೇವಾ ಅಂಕೋಲನ್ ಕರಡು ಪ್ರತಿಯನ್ನು ಸಭೆಯಲ್ಲಿ ಮಂಡಿಸಿದರು.ಅಧ್ಯಕ್ಷತೆ ವಹಿಸಿದ್ದ ಚೇತನ್ ಕುಮಾರ್ ಮಾತನಾಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೆಸರನ್ನು ಈಗಿನ ಕೇಂದ್ರ ಸರಕಾರ ವಿಬಿ ಜಿ ರಾಮ್ ಜಿ ಯೋಜನೆ ಎಂದು ಹೆಸರು ಬದಲಾವಣೆ ಮಾಡಿದೆ. ಆದರೆ ಯೋಜನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹಿಂದೆ ಯಾವ ರೀತಿ ನಡೆಯುತ್ತಿತ್ತು ಅದೇ ರೀತಿಯಲ್ಲಿ ಮುಂದುವರೆಯುತ್ತದೆ ಎಂದರು.
ಅಧ್ಯಕ್ಷರು ಸ್ವಚ್ಚತೆಯ ಪ್ರತಿಜ್ಞಾ ವಿದಿಯನ್ನು ಭೋದಿಸಿದರು.ಗ್ರಂಥ ಪಾಲಕಿ ಪವಿತ್ರ. ಜಿ ಸ್ವಾಗತಿಸಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.ಸಿಬ್ಬಂದಿಗಳಾದ ರೇವತಿ, ವಿನೀತ್ ಕುಮಾರ್, ಸಂಶೀನಾ, ಜಯಕುಮಾರಿ ಸಹಕರಿಸಿದರು.










