







ನಿಡ್ಪಳ್ಳಿ; ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಪೇರಲ್ತಡ್ಕ ಶಾಲೆಯಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.


ವಿದ್ಯಾರ್ಥಿಗಳಾದ ಚಾರ್ವಿ ಕೆ ಗೌಡ , ಸ್ಮಿತಾ, ರಿತೀಕ್ಷಾ ಗಾಂಧೀಜಿಯವರ ಕುರಿತು ಭಾಷಣ ಮಾಡಿದರು. ಜಿ.ಪಿ.ಟಿ ಶಿಕ್ಷಕರಾದ ಲಕ್ಷ್ಮಿ ದೇವಿ ಗಾಂಧೀಜಿಯವರ ಜೀವನ, ಸತ್ಯ, ಅಹಿಂಸೆ, ಮತ್ತು ಸ್ವಚ್ಛತೆಯ ಸಂದೇಶದ ಬಗ್ಗೆ ತಿಳಿಸಿದರು.



ಮುಖ್ಯ ಶಿಕ್ಷಕಿ ಜಾನಕಿ .ಕೆ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ತುಳಸಿ ಮತ್ತೀತರರು ಉಪಸ್ಥಿತರಿದ್ದರು.ಕರ್ನಾಟಕ ಸಹಕಾರಿ ಮಹಾ ಮಂಡಳದ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಇವರು ಒದಗಿಸಿದ ಸಿಹಿತಿಂಡಿಯನ್ನು ವಿತರಿಸಲಾಯಿತು.
ನಂತರ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಗಾಂಧೀಜಿಯವರ ಕನಸಿನ ಸ್ವಚ್ಛ ಭಾರತದ ಸಂಕಲ್ಪ ಮಾಡಲಾಯಿತು ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.










