







ನೆಲ್ಯಾಡಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಸರಕಾರಿ ಪ್ರೌಢಶಾಲೆ ಹಿರೇಬಂಡಾಡಿ ಇದರ ಆಶ್ರಯದಲ್ಲಿ ಹಿರೇಬಂಡಾಡಿ ಸರಕಾರಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆದ ಉಪ್ಪಿನಂಗಡಿ ವಲಯ ಮಟ್ಟದ ಕ್ರೀಡಾಕೂಟದ 17 ಹಾಗೂ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ ಚಾಂಪಿಯನ್ ಆಗಿದೆ.


17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ 9ನೇ ತರಗತಿಯ ಕೌಶಿಕ್ 800 ಮೀ., 1500 ಮೀ. ಹಾಗೂ 3000 ಮೀ. ಓಟದಲ್ಲಿ ಮೂರು ಚಿನ್ನದ ಪದಕಗಳನ್ನು ಗಳಿಸಿ ವೈಯಕ್ತಿಕ ಚಾಂಪಿಯನ್‌ಶಿಪ್ ಪಡೆದರು. 10ನೇ ತರಗತಿಯ ಡಾಲ್ವಿನ್ 100 ಮೀ. ಓಟದಲ್ಲಿ ಕಂಚಿನ ಪದಕ, 8ನೇ ತರಗತಿಯ ಶಿಬಿನ್ 400 ಮೀ. ಓಟದಲ್ಲಿ ಕಂಚಿನ ಪದಕ ಹಾಗೂ ನಿದೀಶ್ ಟ್ರಿಪಲ್ ಜಂಪ್‌ನಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. 4/400 ಮೀ. ರಿಲೇಯಲ್ಲಿ ಕೌಶಿಕ್, ರಿಶಾನ್, ಶಿಬಿನ್ ಹಾಗೂ ನಿದೀಶ್ ತಂಡ ಬೆಳ್ಳಿ ಪದಕ ಪಡೆದುಕೊಂಡಿದೆ.



14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ 8ನೇ ತರಗತಿಯ ಅಲೆನ್ ಪ್ರದೀಪ್ 100 ಮೀ., 200 ಮೀ. ಹಾಗೂ 400 ಮೀ. ಓಟದಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದು ವೈಯಕ್ತಿಕ ಚಾಂಪಿಯನ್‌ಶಿಪ್ ಪಡೆದರು. ಭವಿತ್ 600 ಮೀ. ಓಟದಲ್ಲಿ ಬೆಳ್ಳಿ ಹಾಗೂ ಮೊಹ್ ಅನಾಸ್ ಕಂಚಿನ ಪದಕ ಪಡೆದುಕೊಂಡರು. 4/400 ಮೀ. ರಿಲೇಯಲ್ಲಿ 8ನೇ ತರಗತಿಯ ಅನ್ವಿತ್, 8ನೇ ತರಗತಿಯ ರಿಷಿಕ್ ಹಾಗೂ 6ನೇ ತರಗತಿಯ ಅನಾಸ್ ಅವರನ್ನೊಳಗೊಂಡ ತಂಡ ಚಿನ್ನದ ಪದಕ ಗಳಿಸಿತು. ಬಾಲಕರ 17 ಮತ್ತು 14ರ ವಯೋಮಾನ ವಿಭಾಗದಲ್ಲಿ ಸಂಸ್ಥೆಗೆ ಚಾಂಪಿಯನ್ ಪಟ್ಟ ಪಡೆದುಕೊಂಡಿದೆ. ವಿದ್ಯಾರ್ಥಿಗಳಿಗೆ ಸಂಸ್ಥೆಯ ಪ್ರಾಂಶುಪಾಲರಾದ ಡಾ. ವರ್ಗಿಸ್ ಕೈಪನಡ್ಕ, ಬರ್ಸರ್ ಸ್ಯಾಮುವೆಲ್ ಜಾರ್ಜ್ ಅವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಅಲ್ಫೋನ್ಸಾ ಮಥಾಯಿ, ಸುಧಾಕರ್ ಮತ್ತು ಮನೋಜ್ ತರಬೇತಿ ನೀಡಿದ್ದರು.










