ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಿಗೆ ಪಿಡಿಓ ಹುದ್ದೆಗೆ ಮುಂಭಡ್ತಿ

0

ಪುತ್ತೂರು:ದಕ್ಷಿಣ ಕನ್ನಡ ಜಿಲ್ಲೆಯ 21 ಗ್ರಾಮ ಪಂಚಾಯತ್‌ಗಳಲ್ಲಿ ಕಾರ್ಯದರ್ಶಿ ಕಂ ಗ್ರಾಮೀಣಾಭಿವೃದ್ಧಿ ಸಹಾಯಕರು ಗ್ರೇಡ್-1 ವೃಂದದ ಒಟ್ಟು 21 ಮಂದಿ ನೌಕರರಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಮುಂಭಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಆದೇಶಿಸಿದೆ.


ಗ್ರೇಡ್-1 ಕಾರ್ಯದರ್ಶಿಗಳಾದ ಕೆದಂಬಾಡಿ ಗ್ರಾ.ಪಂ.ನ ಶೇಖ್ ಖಲಂದರ್ ಅಲಿ ಅವರು ಪೆರ್ನೆ ಗ್ರಾ.ಪಂಗೆ, ಅರಿಯಡ್ಕ ಗ್ರಾ.ಪಂನ ಆಶಾ ಬಿ.ಅವರು ಬಂಟ್ವಾಳ ತಾಲೂಕಿನ ಕೇಪು ಗ್ರಾ.ಪಂಗೆ, ಪುಣಚ ಗ್ರಾ.ಪಂನ ಸೃಜನ್ ಸುಳ್ಯ ತಾಲೂಕಿನ ಅಜ್ಜಾವರ ಗ್ರಾ. ಪಂಗೆ., ಬೆಳ್ತಂಗಡಿಯ ಧರ್ಮಸ್ಥಳ ಗ್ರಾ.ಪಂನ ಶ್ರವಣ್ ಕುಮಾರ್ ಕೊಳ್ತಿಗೆ ಗ್ರಾ.ಪಂಗೆ, ಬಂಟ್ವಾಳದ ಅಮ್ಟಾಡಿ ಗ್ರಾ.ಪಂನ ಶಾಂತಿ ಎ. ಅವರು ಹಿರೇಬಂಡಾಡಿ ಗ್ರಾ.ಪಂಗೆ, ಬಂಟ್ವಾಳದ ಇಡ್ಕಿದು ಗ್ರಾ.ಪಂನ ದಾಮೋದರ ಅವರು ಕಾಣಿಯೂರು ಗ್ರಾ.ಪಂಗೆ, ನರಿಮೊಗರು ಗ್ರಾ.ಪಂನ ಕೆ.ಪಿ.ಸುಬ್ಬಯ್ಯ ಅವರನ್ನು ವಿರಾಜಪೇಟೆ ತಾಲೂಕಿನ ಬಿಟ್ಟಂಗಲ ಗ್ರಾ.ಪಂಗೆ ಹಾಗೂ ಬೆಳ್ಳಾರೆ ಗ್ರಾ.ಪಂ.ನ ದಯಾನಂದ ಪಿ.ಅವರನ್ನು ಕಡಬ ತಾಲೂಕು ಬಳ್ಪ ಗ್ರಾ.ಪಂ.ಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.

ಈ ಪೈಕಿ ಅರಿಯಡ್ಕ ಗ್ರಾ.ಪಂನ ಗ್ರೇಡ್-1 ಕಾರ್ಯದರ್ಶಿ ಆಶಾ ಬಿ.ಅವರು ಪಾಣಾಜೆ ಗ್ರಾ.ಪಂ., ನರಿಮೊಗರು ಗ್ರಾ.ಪಂನ ಕೆ.ಪಿ ಸುಬ್ಬಯ್ಯ ಅವರು ನೆಟ್ಟಣಿಗೆ ಮುಡ್ನೂರು ಗ್ರಾ.ಪಂನಲ್ಲಿ ಗ್ರೇಡ್-1 ಕಾರ್ಯದರ್ಶಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಕೆದಂಬಾಡಿಯ ಶೇಖ್ ಖಲಂದರ್ ಅಲಿ ಅವರು ನರಿಮೊಗರು ಗ್ರಾ.ಪಂನ ಗ್ರೇಡ್-1 ಕಾರ್ಯದರ್ಶಿ ಹುದ್ದೆಯ ಜೊತೆಗೆ ತಾ.ಪಂನಲ್ಲಿ ವಿಷಯ ನಿರ್ವಾಹಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.


ಕಡೇಶ್ವಾಲ್ಯ ಗ್ರಾ.ಪಂ.ನ ಅಜಿತ್ ಕುಮಾರ್ ಅವರನ್ನು ಸುಳ್ಯ ಜಾಲ್ಸೂರು ಗ್ರಾ.ಪಂ.ಗೆ.,ಬಂಟ್ವಾಳ ಪುದು ಗ್ರಾ.ಪಂ.ನಿಂದ ಚಂದ್ರಾವತಿ ಅವರನ್ನು ಬೆಳ್ತಂಗಡಿ ಮಚ್ಚಿನ ಗ್ರಾ.ಪಂ.ಗೆ.,ಬಂಟ್ವಾಳ ಚೆನೈತ್ತೋಡಿ ಗ್ರಾ.ಪಂ.ನ ವೈಲೆಟ್ ಮಿನೇಜಸ್ ಅವರನ್ನು ಮಂಗಳೂರು ಮುತ್ತೂರು ಗ್ರಾ.ಪಂ.ಗೆ, ಉಳ್ಳಾಲ ಮಂಜನಾಡಿ ಗ್ರಾ.ಪಂ.ನ ಸುಚಿತ್ರಾ ಎಸ್.ಅವರನ್ನು ಬಂಟ್ವಾಳ ಕುಕ್ಕಿಪಾಡಿ ಗ್ರಾ.ಪಂ.ಗೆ.,ಉಳ್ಳಾಲ ಬಾಳೆಪುಣಿ ಗ್ರಾ.ಪಂ.ನ ಆಯಿಷಾ ಬಾನು ಬಿ.ಎ.ಅವರನ್ನು ಬಂಟ್ವಾಳ ಸಾಲೆತ್ತೂರು ಗ್ರಾ.ಪಂ.ಗೆ ನಿಯುಕ್ತಿಗೊಳಿಸಿ ದ.ಕ.ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ನರವಾಡೆ ವಿನಾಯಕ ಕಾರಭಾರಿ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here