







ಪುತ್ತೂರು: ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್ ತರ್ಬಿಯತುಲ್ ಇಸ್ಲಾಂ ಜಮಾಅತ್ ಕಮಿಟಿ ವತಿಯಿಂದ ಇಸ್ಲಾಂ ಧರ್ಮದ ಪರಮೋಚ್ಚ ಧಾರ್ಮಿಕ ಗುರು ಸುಲ್ತಾನುಲ್ ಅವ್ಲಿಯಾ ಶೇಖ್ ಅಬ್ದುಲ್ ಖಾದರ್ ಜೀಲಾನಿ ಅವರ ಸಂಸ್ಮರಣೆ ಅಂಗವಾಗಿ ವರ್ಷಂಪ್ರತಿ ಅರಬಿಕ್ ತಿಂಗಳ ರಬೀವುಲ್ ಆಖರ್ 22ರಂದು ನಡೆಸಿಕೊಂಡು ಬರುವ ರಾತೀಬ್ ನೇರ್ಚೆ ಪ್ರಾರ್ಥನಾ ಸಂಗಮ ಗಾಂಧಿನಗರದ ಜುಮ್ಮಾ ಮಸೀದಿಯಲ್ಲಿ ನಡೆಯಿತು.


ಜುಮ್ಮಾ ಮಸೀದಿ ಖತೀಬರಾದ ಅಲ್ಹಾಜ್ ಅಶ್ರಫ್ ಕಾಮಿಲ್ ಸಖಾಫಿ ನೇತೃತ್ವ ವಹಿಸಿದ್ದರು. ಅಸ್ಸಯ್ಯದ್ ಕುಂಞಕೋಯ ತಂಞಳ್ ಸಅದಿ ದುವಾ ನೆರವೇರಿಸಿದರು.



ಪ್ರಾರ್ಥನಾ ಸಂಗಮದಲ್ಲಿ ಜುಮ್ಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಕೆ.ಎಂ.ಎಸ್. ಮಹಮ್ಮದ್, ಮಾಜಿ ಅಧ್ಯಕ್ಷ ಹಾಜಿ ಕೆ.ಎಂ. ಮುಸ್ತಫ, ಪ್ರಧಾನ ಕಾರ್ಯದರ್ಶಿ ಹಾಜಿ ಐ. ಇಸ್ಮಾಯಿಲ್, ಉಪಾಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ, ಕಾರ್ಯದರ್ಶಿ ಕೆ.ಎಸ್. ಉಮ್ಮರ್, ನಿರ್ದೇಶಕರಾದ ಹಾಜಿ ಯಾಕೂಬ್ ಎಸ್.ಟಿ., ಶಾಹುಲ್ ಹಮೀದ್ ಕುತ್ತಾಮೊಟ್ಟೆ, ಅಬೂಬಕ್ಕರ್ ಫ್ಯಾನ್ಸಿ, ಸಿದ್ದೀಕ್ ಕೊಡಿಯಮ್ಮೆ, ಹಾಜಿ ಕೆ.ಎಂ. ಮುಹಿಯ್ಯದ್ದೀನ್ ಫ್ಯಾನ್ಸಿ, ಮುದರ್ರಿಸ್ ಮುಬಶ್ಶಿರ್ ಅಹ್ಸನಿ ಸೇರಿದಂತೆ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.ಕೊನೆಯಲ್ಲಿ ಅನ್ನದಾನ ಏರ್ಪಡಿಸಲಾಗಿತ್ತು.










