ವಿವೇಕಾನಂದ ಕಾಲೇಜಿನಲ್ಲಿ ಹಿಂದಿ ದಿವಸ್ ಸಮಾರಂಭ

0

ಪುತ್ತೂರು: ಹಿಂದಿ ಕೇವಲ ಒಂದು ಭಾಷೆಯಲ್ಲ, ಅದು ಸರಳ, ಸುಂದರ ಮತ್ತು ನಮ್ಮ ಭಾವನೆಗಳನ್ನು ಬೆಸೆಯುವ ಒಂದು ಭಾಷೆಯಾಗಿದೆ. ಯಾವ ಭಾಷೆ ಹೃದಯಗಳನ್ನು ಬೆಸೆಯುತ್ತದೆಯೋ ಆ ಭಾಷೆ ಮಹಾನ್ ಆಗಿರುತ್ತದೆ, ಹಿಂದಿ ಭಾರತವನ್ನು ಭಾವನೆಗಳ ಮೂಲಕ ಬೆಸೆಯುವ ಭಾಷೆಯಾಗಿದೆ. ದೇಶದ ಏಕತೆಗಾಗಿ ಮತ್ತು ಸಾಂಸ್ಕೃತಿಕ ಉನ್ನತಿಗಾಗಿ ಹಿಂದಿ ಭಾಷೆ ಕಲಿಯೋಣ ಎಂದು ಎನ್‌ಎಸ್‌ಎಸ್ ಸಂಯೋಜಕಿ ಮತ್ತು ವಾಣಿಜ್ಯ ವಿಭಾಗದ ಉಪನ್ಯಾಸಕಿ ವಿದ್ಯಾ ಕೆ. ಎನ್. ಹೇಳಿದರು.


ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ ) ಇಲ್ಲಿನ ಹಿಂದಿ ವಿಭಾಗ, ಹಿಂದಿ ಸಂಘ ಮತ್ತು ಐಕ್ಯೂಎಸಿ ಘಟಕದ ಜಂಟಿ ಆಶ್ರಯದಲ್ಲಿ ನಡೆದ ’ಹಿಂದಿ ದಿವಸ್’ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಎಸ್ ಮಾತನಾಡಿ, ಬಹು ಭಾಗಗಳಲ್ಲಿ ಪ್ರಾವೀಣ್ಯತೆ ಪಡೆಯುವುದು ಉತ್ತಮವಾದ ವಿಷಯ. ನಮ್ಮ ಮಾತೃ ಭಾಷೆ, ಕನ್ನಡ ಭಾಷೆಗಳ ಜೊತೆಗೆ ವೃತ್ತಿ ಬದುಕಿನ ಯಶಸ್ಸಿಗಾಗಿ ಇಂಗ್ಲಿಷ್ ಭಾಷೆಯ ಕಲಿಕೆ ಅಗತ್ಯವಾಗಿದೆ. ಅದೇ ಸಮಯದಲ್ಲಿ ಹಿಂದಿ ಭಾಷೆಯ ಕಲಿಕೆ ಹಲವು ಭಾರಿ ನೆರವಾಗುತ್ತದೆ. ಏಕೆಂದರೆ ಅದು ನಮ್ಮ ದೇಶಾದ್ಯಂತ ಒಪ್ಪಿತವಾದ ಭಾಷೆಯಾಗಿದೆ ಎಂದರು.


ಕಾರ್ಯಕ್ರಮದಲ್ಲಿ ’ಹಿಂದಿ ದಿವಸ್’ ಪ್ರಯುಕ್ತ ಆಯೋಜಿಸಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಹಿಂದಿ ದಿವಸ್ ಪ್ರಯುಕ್ತ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಗಳು ನಡೆದವು. ವೇದಿಕೆಯಲ್ಲಿ ಹಿಂದಿ ವಿಭಾಗದ ಮುಖ್ಯಸ್ಥೆ ಮತ್ತು ಹಿಂದಿ ಸಂಘದ ಸಂಯೋಜಕಿ ಡಾ. ದುರ್ಗಾರತ್ನ ಸಿ, ಹಿಂದಿ ವಿಭಾಗದ ಉಪನ್ಯಾಸಕಿ ಪೂಜಾ ವೈ ಡಿ, ಹಿಂದಿ ಸಂಘದ ಅಧ್ಯಕ್ಷೆ ಪ್ರಿಯಾ ಪಾರ್ವತಿ ಮತ್ತು ಉಪಾಧ್ಯಕ್ಷೆ ಭೂಮಿಕ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿಯರಾದ ನಿಶಾ, ಕೀರ್ತಿ ಶೆಟ್ಟಿ, ಪ್ರೀತಿಕಾ ನಿರೂಪಿಸಿ, ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿನಿ ದಿಶಾ ಪಿ. ಎಚ್ ಸ್ವಾಗತಿಸಿ, ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಭೂಮಿಕಾ ವಂದಿಸಿದರು.

LEAVE A REPLY

Please enter your comment!
Please enter your name here