







ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ನಿಡ್ಪಳ್ಳಿ ಒಕ್ಕೂಟದ ತ್ರೈಮಾಸಿಕ ಸಭೆ ಒಕ್ಕೂಟದ ಅಧ್ಯಕ್ಷ ಕುಶಾಲಪ್ಪ ನಾಯ್ಕರವರ ಅಧ್ಯಕ್ಷತೆಯಲ್ಲಿ ಅ.4 ರಂದು ಶ್ರೀ ಶಾಂತಾದುರ್ಗಾ ದೇವಸ್ಥಾನದ ಅನುಗ್ರಹ ಸಭಾಭವನದಲ್ಲಿ ನಡೆಯಿತು.


ಬೆಟ್ಟಂಪಾಡಿ ವಲಯದ ಮೆಲ್ವೀಚಾರಕ ಆದರ್ಶ್ ಮತ್ತು ಸೇವಾ ಪ್ರತಿನಿಧಿ ಶಾಲಿನಿ ಮಾಹಿತಿ ನೀಡಿದರು.ಜತೆ ಕಾರ್ಯದರ್ಶಿ ನವನೀತ ವೇದಿಕೆಯಲ್ಲಿ ಉಪಸ್ಥಿತರಿದ್ದರು.



ಹರಿಪ್ರಸಾದ್ ಸಿ.ಎಚ್ ಸ್ವಾಗತಿಸಿ,ಶ್ರೀ ಹರಿ ತಂಡದ ಮಂಜುನಾಥ. ಕೆ ವರದಿ ವಾಚಿಸಿದರು.ಒಕ್ಕೂಟದ ಕಾರ್ಯದರ್ಶಿ ಸುಮಿತ್ರಾ ಒಕ್ಕೂಟದ ವರದಿ ವಾಚಿಸಿದರು.ಒಕ್ಕೂಟದ ಕೋಶಾಧಿಕಾರಿ ಗಂಗಾಧರ ಸಿ.ಎಚ್ ವಂದಿಸಿದರು.ಒಕ್ಕೂಟದ ಸದಸ್ಯರು ಪಾಲ್ಗೊಂಡರು.










