







ಪುತ್ತೂರು: ದ ಕ ಜಿ ಪಂ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸುದಾನ ವಸತಿಯುತ ಶಾಲೆ ಪುತ್ತೂರು ಇವರ ಆಶ್ರಯದಲ್ಲಿ ನಡೆದ ದ.ಕ ಜಿಲ್ಲಾ ಮಟ್ಟದ 14 ರ ಮತ್ತು 17 ರ ವಯೋಮಾನದ ಬಾಲಕರ ಕ್ರಿಕೆಟ್ ಪಂದ್ಯಾಟದ ಎರಡು ವಿಭಾಗದಲ್ಲಿಯೂ ಸುದಾನ ಶಾಲೆ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗೀಯ ಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಆಯ್ಕೆ ಆಗಿರುತ್ತಾರೆ.



14 ರ ವಯೋಮಾನದ ತಂಡದಲ್ಲಿ ಆಯುರ್ ವರ್ಷ (ಕಪ್ತಾನ) ಮೊಹಮ್ಮದ್ ಕೈಸ್, ಸಯ್ಯದ್ ಅಮನ್, ಸಯ್ಯದ್ ಸಿಯಾನ್, ಕಿಯಾನ್ ಖಾನ್ (8 ನೇ) ಆದಿತ್ಯ ಬೌಧ್, ಧನ್ವಿತ್, ಸ್ಪರ್ಶಿತ್, ಕೌಶಿಕ್, ಶ್ರೀಶಾಂತ್, ಶಹಾನ್ ರೆಹಮಾನ್ (7ನೇ) ಆರ್ಯನ್, ಅಧ್ವಿಕ್ ಮತ್ತು ತಮೀಮ್ (6 ನೇ)17 ರ ವಯೋಮಾನದ ತಂಡದಲ್ಲಿ ಮೊಹಮ್ಮದ್ ಅಜ್ಮಲ್ (ಕಪ್ತಾನ) ಮೊಹಮ್ಮದ್ ಅರ್ಹಾನ್, ಇಬ್ರಾಹಿಂ ಫಾಸಿಲ್, ತುಷಾರ್ ಸುವರ್ಣ,ಸಾಯಿ ಕಿರಣ್, ಮಾನ್ ಶೆಟ್ಟಿ, ರೋಹನ್ ಸಿ ಸಿ, ಸುಮಂತ್, ಯಾತ್ರಿಕ್, ವಿನ್ಯಾಸ (10 ನೇ) ಧಿಶಾನ್ ಎಸ್ ಕೆ, ಸಂಭ್ರಮ್ ಶೆಟ್ಟಿ, ಮೊಹಮ್ಮದ್ ರಮೀನ್,(9ನೇ) ಸೋಹಂ ರೈ ( 8ನೇ). ಪಂದ್ಯಾಟದ ಸರ್ವಾಂಗೀಣ ಆಟಗಾರ ಪ್ರಶಸ್ತಿಗೆ ಸಂಭ್ರಮ್ ಕುಶಾಲ್ ಶೆಟ್ಟಿ ಭಾಜನರಾದರು. ಇವರನ್ನು ಶಾಲಾ ಸಂಚಾಲಕರಾದ ರೆ/ ವಿಜಯ ಹಾರ್ವಿನ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗರಾಜ್, ಶಾಲಾ ಕೋಶಾಧಿಕಾರಿ ಆಸ್ಕರ್ ಆನಂದ್, ಶಾಲಾ ಆಡಳಿತ ಅಧಿಕಾರಿ ಸುಶಾಂತ್ ಹಾರ್ವಿನ್, ಶಾಲಾ ದೈ ಶಿ ಶಿಕ್ಷಕರಾದ ಪುಷ್ಪರಾಜ್ ಲೀಲಾವತಿ ಹಾಗೂ ಜೀವಿತ ಅಭಿನಂದಿಸಿ ಶುಭ ಹಾರೈಸಿದರು. ಇವರಿಗೆ ಸುದಾನ ಕ್ರಿಕೆಟ್ ಅಕಾಡೆಮಿಯ ಕಿರಣ್ ಕುಮಾರ್ ಹಾಗೂ ಶಾಲಾ ದೈ ಶಿ ಶಿಕ್ಷಕರಾದ ನವೀನ್ ಕಡಬ ತರಬೇತಿ ನೀಡಿರುತ್ತಾರೆ.













