ಸುದಾನ ಶಾಲೆಯ ವಿದ್ಯಾರ್ಥಿಗಳ 2 ಯೋಜನೆಗಳು ಎನ್ ಸಿ ಎಸ್ ಸಿ ವಿಜ್ಞಾನ ಅಧಿವೇಶನಕ್ಕೆ ಆಯ್ಕೆ

0

ಪುತ್ತೂರು: ಸುದಾನ ವಸತಿ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರಸ್(ನೇಶನಲ್ ಚಿಲ್ಡ್ರನ್ ಸಯನ್ಸ್ ಕಾಂಗ್ರಸ್-ಎನ್ ಸಿ ಎಸ್ ಸಿ ) ನಡೆಸುವ ವಿಜ್ಞಾನ ಪ್ರಾಜೆಕ್ಟ್ ಜಿಲ್ಲಾಮಟ್ಟಕ್ಕೆ  ಆಯ್ಕೆಯಾಗಿದ್ದಾರೆ.ಜ್ಯೂನಿಯರ್ ವಿಭಾಗದಲ್ಲಿ‌ ಸಂಭ್ರಮ್ ಎನ್ ವಿ ಮತ್ತು ಬಿ ಆರ್ ರಿಶಾನ್, ಸೀನಿಯರ್ ವಿಭಾಗದಲ್ಲಿ‌ ವಿದ್ಯಾರ್ಥಿನಿಯರಾದ  ಇಂಪನಾ ಸಿ ಭಟ್ ಮತ್ತು ಆ್ಯಾನ್ಸೆಲ್ ಪ್ರಿನ್ಸಿಟಾ ಗೊನ್ಸಾಲ್ವೆಸ್ ಆಯ್ಕೆಯಾಗಿದ್ದಾರೆ.

ಇವರಿಗೆ ಶಾಲೆಯ ವಿಜ್ಞಾನ ಶಿಕ್ಷಕರಾದ  ರಂಜಿತಾ ಎಂ ಬಿ ಮತ್ತು ಶ್ರೀಮತಿ ನಿರ್ಮಲಾ ಡಿ ಸೋಜಾ ಮಾರ್ಗದರ್ಶನ ಮಾಡಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕರಾದ ರೆ.ವಿಜಯ ಹಾರ್ವಿನ್ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಮತ್ತು ‘ಅವನಿ’ ವಿಜ್ಞಾನ ಸಂಘದ ಸಂಯೋಜಕಿ ಪ್ರತಿಮಾ, ಅಭಿನಂದಿಸಿ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here