ವಾಹನ ಅಪಘಾತ : ಚಿಕಿತ್ಸೆ ಫಲಿಸದೆ ಕುರಿಯ ಮುಲಾರು ನಿವಾಸಿ ಸಾವು

0

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆರ್ಯಾಪು ಗ್ರಾಮದ ಕಾರ್ಪಾಡಿ ದೇವಸ್ಥಾನದ ದ್ವಾರದ ಬಳಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ಕುರಿಯ ಮುಲಾರು ನಿವಾಸಿ ಸುಂದರ ಆಚಾರ್ಯ ಅವರು ಅ.6ರಂದು ಮೃತಪಟ್ಟಿದ್ದಾರೆ.


ಮರದ ಕೆಲಸ ನಿರ್ವಹಿಸುತ್ತಿದ್ದ ಸುಂದರ ಆಚಾರ್ಯ ಅವರು ಮೂರು ದಿನದ ಹಿಂದೆ ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಆರ್ಯಾಪು ಗ್ರಾಮದ ದೇವಸ್ಥಾನದ ದ್ವಾರದ ಬಳಿ ಅವರ ಸ್ಕೂಟರ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಪರಾರಿಯಾಗಿತ್ತು. ಅಪಘಾತದಿಂದ ಗಾಯಗೊಂಡ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ಶಶಿಕಲಾ, ಪುತ್ರರಾದ ಹರ್ಷಿತ್, ರಕ್ಷಿತ್, ಸಹೋದರರು, ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here