ನ.01ರಂದು ಮಜ್ಜಾರಡ್ಕದಲ್ಲಿ ಕೆಸರ್‌ಡೊಂಜಿ ದಿನ, ಆಮಂತ್ರಣ ಪತ್ರಿಕೆ, ಸಂಘಟನೆಯ ನೂತನ ಟೀ ಶರ್ಟ್ ಬಿಡುಗಡೆ

0

ಪುತ್ತೂರು: ರಾಜ್ಯ ಪ್ರಶಸ್ತಿ ಪುರಸ್ಕೃತ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ವತಿಯಿಂದ ನಡೆಯುವ 9 ನೇ ವರ್ಷದ ಕೆಸರುಡೊಂಜಿ ದಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಅ. 4 ರಂದು ನಡೆಯಿತು.

ಮಜ್ಜಾರಡ್ಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಸಂಘಟನೆಯ ಗೌರವ ಸಲಹೆಗರಾರ ಲೋಕೇಶ್ ರೈ ಅಮೈ ಅವರು ಪ್ರಾರ್ಥನೆ ಮಾಡಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಕುಣಿತ ಭಜನಾ ಪ್ರೋತ್ಸಾಹಕರು, ಸಂಘಟನೆಯ ಗೌರವ ಸಲಹೆಗಾರ ಅಜಿತ್ ರೈ ದೇರ್ಲ ಅವರು ಸಂಘಟನೆಯ ನೂತನ ಟೀಶರ್ಟ್ ಬಿಡುಗಡೆಗೊಳಿಸಿದರು. ಸಾಮಾಜಿಕ ಸೇವೆಗೆ ಸದಾ ಪ್ರೋತ್ಸಾಹ ನೀಡುತ್ತಿರುವ ಉದ್ದೇಶದಿಂದ ಮಾಡಿರುವ ಲಕ್ಕಿ ಕೂಪನ್ ಪುಸ್ತಕವನ್ನು ಸಂಘಟನೆಯ ಹಿರಿಯ ಗೌರವ ಸಲಹೆಗಾರ ತಿಮ್ಮಪ್ಪ ಪೂಜಾರಿ ಮಜ್ಜಾರ್ ಮತ್ತು ಗೌರವ ಸಲಹೆಗಾರ ಸುರೇಶ್ ಕುಮಾರ್ ತಿಂಗಳಾಡಿ ಬಿಡುಗಡೆ ಮಾಡಿದರು.




9 ನೇ ವರ್ಷದ ಕೆಸರುಡೊಂಜಿ ದಿನ ಕಾರ್ಯಕ್ರಮ ನ. 1 ರಂದು ಮಜ್ಜಾರ್ ಗದ್ದೆಯಲ್ಲಿ ನಡೆಯಲಿದೆ. ಬೆಳಿಗ್ಗೆ 8 ಗಂಟೆಯಿಂದ 9 ಗಂಟೆಯವರೆಗೆ 12 ಕುಣಿತ ಭಜನಾ ತಂಡದಿಂದ ಸುಮಾರು 300 ಭಜನಾರ್ಥಿಗಳಿಂದ ಕುಣಿತ ಭಜನಾ ಸೇವೆ ನಡೆಯಲಿದೆ, ನಂತರ ಕಾರ್ಯಕ್ರಮದ ಉದ್ಘಾಟನೆಯನ್ನು ಮೀರಾ ಮೋಹನ್ ರೈ ಒಲೆಮುಂಡೋವು ಇವರು ಅತಿಥಿ ಗಣ್ಯರ ಸಮ್ಮುಖದಲ್ಲಿ ನೆರವೇರಿಸಲಿದ್ದಾರೆ. ಕೆಸರುಗದ್ದೆ ಪಂದ್ಯಾಟಕ್ಕೆ ತೆಂಗಿನಕಾಯಿ ಒಡೆಯುವ ಮೂಲಕ ಪಂದ್ಯಾಟ ಆರಂಭವಾಗಲಿದೆ.

ಮಹಿಳೆಯರಿಗೆ ಮುಕ್ತ ವಾಲಿಬಾಲ್ ಮತ್ತು ತ್ರೋಬಲ್ , ಪುರುಷರಿಗೆ ಮುಕ್ತ ವಾಲಿಬಾಲ್ ಪಂದ್ಯಾಟ, (ಕೆಸರಿನ ಪಂದ್ಯಾಟವಲ್ಲ ,) ಕೆಸರ್ ಗದ್ದೆಯಲ್ಲಿ ಪುರುಷರ ಮುಕ್ತ ಹಗ್ಗಜಗ್ಗಾಟ, ಸ್ವ ಸಹಾಯ ಸಂಘದ ಮಹಿಳೆಯರಿಗೆ ಮುಕ್ತ ಹಗ್ಗಜಗ್ಗಾಟ ನಡೆಯಲಿದೆ, ಸ್ಥಳೀಯರಿಗೆ ಮತ್ತು ವಿದ್ಯಾರ್ಥಿಗಳಿಗೆ, ಮಹಿಳೆಯರು, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಗುಂಪು ಆಟಗಳಿಗೆ ಕಬ್ಬಡಿ, ಹಗ್ಗಜಗ್ಗಾಟಗಳಿಗೆ ಸ್ಥಳದಲ್ಲಿ ತಂಡ ರಚನೆ ಮಾಡಲಾಗುವುದು.

ಎಲ್ಲಾ ಆಟೋಟ ಸ್ಪರ್ಧೆಗಳು ಸಂಜೆ 5 ಗಂಟೆಗೆ ಮುಕ್ತಾಯಗೊಂಡು ನಂತರ ಸಂಜೆ 6,30 ರಿಂದ ದಿ. ಜಯಂತಿ ಮಜ್ಜಾರ್ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ, ರಾತ್ರಿ 7,30 ರಿಂದ ಸಂಘಟನೆಯ ಗೌರವ ಅಧ್ಯಕ್ಷರಾದ ಶರತ್ ರೈ ಓಲ್ತಾಜೆ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಯುವ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ, ಜಿಲ್ಲಾ ಮತ್ತು ತಾಲೂಕು ಯುವಕ, ಯುವತಿ ಮಂಡಲಗಳು, ಸಂಘ ಸಂಸ್ಥೆಗಳಿಗೆ ಮಜ್ಜಾರಡ್ಕ ವಿಷ್ಣು ಯುವ ಸಿರಿ -2026. ಪ್ರಶಸ್ತಿ ಪ್ರದಾನ, ಸಂಘಟನೆಗೆ ಸಹಕಾರ ನೀಡಿದವರಿಗೆ ಗೌರವ ಅರ್ಪಣೆ ನಡೆಯಲಿದೆ.

ರಾತ್ರಿ 8,30 ಕ್ಕೆ ಚೈತನ್ಯ ಕಲಾವಿದರು ಬೈಲೂರು ಇವರಿಂದ ಪ್ರಸನ್ನ ಶೆಟ್ಟಿ ಬೈಲೂರ್ ಇವರ ಸಾಮಾಜಿಕ ನಾಟಕ ರಾಘು ಮಾಸ್ಟ್ರು’ ಪ್ರದರ್ಶನಗೊಳ್ಳಲಿದೆ ಎಂದು ಕಾರ್ಯಕ್ರಮದ ಸಂಘಟಕರು, ಸಂಘಟನಾ ಕಾರ್ಯದರ್ಶಿ, ಪುತ್ತೂರು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ, ರಾಜ್ಯ ಪ್ರಶಸ್ತಿ ಪುರಸ್ಕೃತ ರಾಜೇಶ್ ಕೆ ಮಯೂರ ಗೋಳ್ತೀಲ ಇವರು ವಿವರಿಸಿದರು.

ಸಂಘಟನೆಯ ಹಿರಿಯ ಸದಸ್ಯ ಜನಾರ್ಧನ ಗೌಡ ಕಡಮಜಲು ಲಘು ಉಪಹಾರದ ವ್ಯವಸ್ಥೆ ಮಾಡಿದ್ದರು. ಸಂಘಟನೆಯ ನಿಯೋಜಿತಾ ಅಧ್ಯಕ್ಷ ಯತೀಶ್ ಮಡಿವಾಳ ಕೋಡಿಯಡ್ಕ ಕಾರ್ಯಕ್ರಮದ ಯಶಸ್ವಿಗೆ ಸಮಾಜ ಬಂಧುಗಳ ಸಹಕಾರ ಕೋರಿದರು. ಈ ಸಂದರ್ಭದಲ್ಲಿ ಸ್ಥಳೀಯ ಸಂಘಟನಾ ಪೋಷಕರು ಮತ್ತು ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ನ.01: ಮಜ್ಜಾರಡ್ಕ ವಿಷ್ಣು ಯುವ ಸಿರಿ ಪ್ರಶಸ್ತಿ ಪ್ರಧಾನ
ನ.01 ರಂದು ನಡೆಯುವ ಈ ವರ್ಷದ ಶ್ರೀ ವಿಷ್ಣು ಯುವಶಕ್ತಿ ಬಳಗದ ಕೆಸರ್‌ಡೊಂಜಿ ಕಾರ್ಯಕ್ರಮದಲ್ಲಿ ಜಿಲ್ಲೆ, ತಾಲೂಕು ಮಟ್ಟದಲ್ಲಿ ಸಮಾಜ ಸೇವೆಯೊಂದಿಗೆ ಕಾರ್ಯಚಟುವಟಿಕೆ ನಡೆಸುತ್ತಿರುವ ಸಂಘಟನೆಯನ್ನು ಗುರುತಿಸಿ ಅವರಿಗೆ ಮಜ್ಜಾರಡ್ಕ ವಿಷ್ಣು ಯುವ ಸಿರಿ ಪ್ರಶಸ್ತಿ-2026′ ಪ್ರಧಾನ ಮಾಡಲಿದ್ದಾರೆ. ಪ್ರತಿ ವರ್ಷ ಒಂದಲ್ಲೊಂದು ವಿಶೇಷತೆಯನ್ನು ಹೊರತರುತ್ತಿರುವ ಯುವಶಕ್ತಿ ಬಳಗವು ಈಗಾಗಲೇ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ವಿಶೇಷವಾಗಿದೆ

LEAVE A REPLY

Please enter your comment!
Please enter your name here