ಕಡಬ, ಪುತ್ತೂರು ತಾಲೂಕು ಗ್ರಾಮ ಪಂಚಾಯತ್ ಮಟ್ಟದ ಒಕೂಟ್ಟದ ಸಿಬ್ಬಂದಿಗಳ ಯೂನಿಯನ್ ಸಮಿತಿ

0

ಅಧ್ಯಕ್ಷೆ ಅಂಬಿಕಾ, ಉಪಾಧ್ಯಕ್ಷೆ ವಿನುತಾ ರೈ, ಪ್ರಧಾನ ಕಾರ್ಯದರ್ಶಿ ಭವ್ಯ, ಜೊತೆ ಕಾರ್ಯದರ್ಶಿ ಆಲಿಸ್ ಜೋಸ್, ಕೋಶಾಧಿಕಾರಿ ಚೈತ್ರ

ಪುತ್ತೂರು: ಕಡಬ ಮತ್ತು ಪುತ್ತೂರು ತಾಲೂಕಿನ ಗ್ರಾಮ ಪಂಚಾಯತ್ ಮಟ್ಟದ ಒಕೂಟ್ಟಗಳ ಮುಖ್ಯ ಪುಸ್ತಕ ಬರಹಗಾರರು ಹಾಗೂ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಯೂನಿಯನ್ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ನೂತನ ಅಧ್ಯಕ್ಷರಾಗಿ ಬಲ್ನಾಡು ಗ್ರಾಮ ಪಂಚಾಯತ್ ಎಂ ಬಿ ಕೆ ಅಂಬಿಕಾ, ಉಪಾಧ್ಯಕ್ಷರಾಗಿ ಕಾಣಿಯೂರು ಗ್ರಾಮ ಪಂಚಾಯತ್ ಎಲ್ ಸಿ ಆರ್ ಪಿ ವಿನುತಾ ರೈ, ಪ್ರಧಾನ ಕಾರ್ಯದರ್ಶಿಯಾಗಿ ಎಡಮಂಗಲ ಗ್ರಾಮ ಪಂಚಾಯತ್ ಎಂ ಬಿ ಕೆ ಭವ್ಯ, ಜೊತೆ ಕಾರ್ಯದರ್ಶಿಯಾಗಿ ಶಿರಾಡಿ ಗ್ರಾಮ ಪಂಚಾಯತ್ ನ ಎಲ್ ಸಿ ಆರ್ ಪಿ ಆಲಿಸ್ ಜೋಸ್, ಕೋಶಾಧಿಕಾರಿಯಾಗಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ನ ಎಂ ಬಿ ಕೆ.
ಚೈತ್ರ ಇವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಹಾಗೂ ಕಡಬ ತಾಲೂಕಿನ ಮುಖ್ಯ ಪುಸ್ತಕ ಬರಹಗಾರರು ಹಾಗೂ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here