ಮಹಾರಾಷ್ಟ್ರ ಮೋಹಿ ಗ್ರಾಮದ ನವರಾತ್ರಿ ಉತ್ಸವಕ್ಕೆ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಳದ ಜ್ಯೋತಿ

0

ಪುತ್ತೂರು: ಮಹಾರಾಷ್ಟ್ರದ ಮೋಹಿ ಗ್ರಾಮದಲ್ಲಿ ನವದುರ್ಗ ಉತ್ಸವ ಮಂಡಲ ವತಿಯಿಂದ ನಡೆಯುವ ನವರಾತ್ರಿ ಉತ್ಸವ ಕಾರ್ಯಕ್ರಮಗಳಿಗೆ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಿಂದ ಜ್ಯೋತಿಯನ್ನು ಕೊಂಡೊಯ್ಯಲಾಯಿತು. ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಹರಿನಾರಾಯಣ ಅಸ್ರಣ್ಣರವರು ಪೂಜಾ ವಿಧಿವಿಧಾನ ನೆರವೇರಿಸಿದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ ಮಲಾರಬೀಡುರವರು ನವರಾತ್ರಿ ಉತ್ಸವದ ಆಯೋಜಕರಿಗೆ ಜ್ಯೋತಿ ಹಸ್ತಾಂತರಿಸಿದರು.ಪುತ್ತೂರು ಮಾನಕ ಜ್ಯುವೆಲರ್ಸ್‌ನ ಮಾಲಕರು ಹಾಗೂ ಪುತ್ತೂರು ಶ್ರೀಶಿವ್ ಛತ್ರಪತಿ ಮರಾಠ ಗಣೇಶ್ ಉತ್ಸವ್ ಮಂಡಲ ಸದಸ್ಯ ಸಿದ್ಧನಾಥ್ ಖಂದಾರೆ, ಮಾನಕ ಜ್ಯುವೆಲರ್ಸ್ ಸನತ್ ಕುಮಾರ್ ಖಂದಾರೆ, ಶಿವಶಕ್ತಿ ಜ್ಯುವೆಲರ್ಸನ ದೀಪಕ್ ಖಂದಾರೆ, ಶ್ರೀಲಕ್ಷಿ ಫೈನಾನ್ಸ್ ಚಂದ್ರಕಾಂತ್ ಜಾಧವ್, ಸಂಜಯ್ ಗಾಯಕ್‌ವಾಡ್ ಹಾಗೂ ಮಂಗಳೂರಿನ ಉದ್ಯಮಿಗಳು, ನವರಾತ್ರಿ ಉತ್ಸವ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಮೋಹಿ ಗ್ರಾಮದಲ್ಲಿ ಪ್ರತೀ ವರ್ಷ ನವರಾತ್ರಿ ಉತ್ಸವ ಮಂಡಲ ವತಿಯಿಂದ ನವರಾತ್ರಿ ಉತ್ಸವ ಆಯೋಜಿಸಲಾಗುತ್ತಿದೆ. ಕಳೆದ ಬಾರಿ ಈ ಕಾರ್ಯಕ್ರಮಕ್ಕೆ ಮೈಸೂರು ಶ್ರೀಚಾಮುಂಡೇಶ್ವರಿ ದೇವಾಲಯದಿಂದ ಜ್ಯೋತಿ ಕೊಂಡೊಯ್ಯಲಾಗಿತ್ತು. ಈ ಬಾರಿ ಕಟೀಲು ದೇವಳದಿಂದ ಮಹಾರಾಷ್ಟ್ರದ ಮೋಹಿ ಗ್ರಾಮದವರೆಗೆ ನಡೆದುಕೊಂಡು ಜ್ಯೋತಿ ಕೊಂಡೊಯ್ಯಲಾಗುತ್ತಿದೆ.

LEAVE A REPLY

Please enter your comment!
Please enter your name here