ಮಸ್ಕತ್ -ಒಮನ್ ನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪುತ್ತೂರು ಜಗದೀಶ್ ಆಚಾರ್ಯರಿಗೆ ‘ಓಂಕಾರಶ್ರೀ ಪ್ರಶಸ್ತಿ’

0

ಪುತ್ತೂರು: “ಒಮನ್ ಕರ್ನಾಟಕ ಆರಾಧನಾ ಸಮಿತಿ ಮಸ್ಕತ್” ಇದರ ವತಿಯಿಂದ ಅ.2 ರಂದು ಮಸ್ಕತ್ ನಲ್ಲಿರುವ ಶ್ರೀ ಕೃಷ್ಣ ದೇವಸ್ಥಾನದ ಕಮ್ಯುನಿಟಿ ಹಾಲ್‌ನಲ್ಲಿ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ನಿರಂತರ 4 ಗಂಟೆಗಳ ಓಂಕಾರ ನಾದಾಮೃತ ಸಂಗೀತ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪ್ರತೀ ವರ್ಷ ಕಲಾವಿದರಿಗೆ ನೀಡುವ ‘ಓಂಕಾರಶ್ರೀ ಪ್ರಶಸ್ತಿ’ ಯನ್ನು ಈ ಬಾರಿ ಪುತ್ತೂರು ಜಗದೀಶ್ ಆಚಾರ್ಯರಿಗೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಎಲ್ಲಾ ಸದಸ್ಯರು, ಕನ್ನಡ ಸಂಘ ಓಮನ್. ಕರ್ನಾಟಕ ಜಾನಪದ ಪರಿಷತ್ ಓಮನ್, ವಿಶ್ವಬ್ರಾಹ್ಮಣ ಸಮಾಜ ಮಸ್ಕತ್, ಬಿಲ್ಲವ ಸಮಾಜ ಮಸ್ಕತ್ ಹಾಗೂ ಇನ್ನಿತರ ಎಲ್ಲಾ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here