







ಪುತ್ತೂರು : ಮರಾಠಿ ಸಮಾಜ ಸೇವಾ ಸಂಘ ಗ್ರಾಮ ಸಮಿತಿ ಕೊಳ್ತಿಗೆ-ಪೆರ್ಲಂಪಾಡಿ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವುಗಳ ಜಂಟಿ ಆಶ್ರಯದಲ್ಲಿ ಸಾರ್ವಜನಿಕ ಆಧಾರ್ ಕಾರ್ಡ್ ನೊಂದಣಿ ,ತಿದ್ದುಪಡಿ ಶಿಬಿರ ಹಾಗೂ ಅಂಚೆ ಇಲಾಖೆಯ ವಿವಿಧ ಸೇವಾ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ ಅ.10ರಂದು ಕೊಳ್ತಿಗೆ ಪ್ರಾ.ಕೃ.ಸಹಕಾರಿ ಸಂಘದ ಪೆರ್ಲಂಪಾಡಿ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಹಾಗೂ ಅ.11ರಂದು ಪಾಲ್ತಾಡಿ ಅಂಕತಡ್ಕದಲ್ಲಿರುವ ಕೊಳ್ತಿಗೆ ಪ್ರಾ.ಕೃ.ಸಹಕಾರಿ ಸಂಘದ ಶಾಖೆಯ ಸಭಾಂಗಣದಲ್ಲಿ ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












