







ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ಅ.11ರಿಂದ ಅ.21ರಂದು ನವರಾತ್ರಿ ಉತ್ಸವ ನಡೆಯಲಿದೆ.


ಅ.11ರಂದು ಬೆಳಗ್ಗೆ 7ಕ್ಕೆ ತೆನೆ ತರುವ ಕಾರ್ಯಕ್ರಮ ನಡೆಯಲಿದ್ದು, ಸಂಜೆ 7ಕ್ಕೆ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯವರಿಂದ ಭಜನಾ ಸೇವೆ ನಡೆಯಲಿದೆ. ನವರಾತ್ರಿಯ 9 ದಿನಗಳಲ್ಲಿ ರಾತ್ರಿ 9ರಿಂದ ಶ್ರೀ ಮಹಾಕಾಳಿ ಅಮ್ಮನವರಿಗೆ ನವರಾತ್ರಿಯ ವಿಶೇಷ ಪೂಜೆ ನಡೆಯಲಿದ್ದು, ಬಳಿಕ ಪ್ರಸಾದ ವಿತರಣೆಯಾಗಿ, ಅನ್ನಪ್ರಸಾದ ವಿತರಣೆ ನಡೆಯಲಿದೆ. ಅ.21ರಂದು 12:30ರಿಂದ ಹೊಸ ಅಕ್ಕಿ ಊಟ ನಡೆಯಲಿದೆ.



ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ಸಂಗಮ ತಾಣ ಮೋಕ್ಷದಾಯಕ ಕ್ಷೇತ್ರವೆಂದೇ ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಅ.10 ರ ಮಹಾಲಯ ಅಮವಾಸ್ಯೆಯಂದು ರಾಜ್ಯ- ಹೊರ ರಾಜ್ಯದಿಂದ ಭಾರೀ ಸಂಖ್ಯೆಯ ಶ್ರದ್ದಾಳುಗಳು ಆಗಮಿಸುವ ನಿರೀಕ್ಷೆ ಇದ್ದು, ತಿಲಹೋಮಾದಿ ಪಿಂಡ ಪ್ರದಾನ ಹಾಗೂ ಪಿತೃ ತರ್ಪಣ ಕಾರ್ಯಗಳಿಗೆ ಹೆಚ್ಚಿನ ವಿಭಾಗಗಳನ್ನು ತೆರೆದು ಭಕ್ತರಿಗೆ ಅನುಕೂಲತೆಯನ್ನು ಒದಗಿಸಲಾಗಿದೆ. ಮಹಾಲಯ ಕಳೆದ ಬಳಿಕ ಪ್ರಾರಂಭವಾಗುವ ನವರಾತ್ರಿ ಉತ್ಸವದಲ್ಲಿ ಈ ಬಾರಿಯಿಂದ ನವರಾತ್ರಿ ಪೂಜೆಯನ್ನು ಪರಂಪರಾಗತವಾಗಿ ನಡೆಸಿಕೊಂಡು ಬರುತ್ತಿದ್ದ ಭಕ್ತಾದಿಗಳ ಜೊತೆ ಉಳಿದ ಆಸಕ್ತ ಭಕ್ತರಿಗೂ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ. ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್ ತಿಳಿಸಿದ್ದಾರೆ.










