ಶರವೂರು: ದುರ್ಗಾ ಸಪ್ತಶತೀ ಪಾಠ ಸಮಾಪನ

0


ರಾಮಕುಂಜ: ಶಿವಳ್ಳಿ ಸಂಪದ ರಾಮಕುಂಜ ವಲಯ ಇದರ ಆಶ್ರಯದಲ್ಲಿ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎರಡು ವಾರ ನಡೆದ ದುರ್ಗಾ ಸಪ್ತಶತೀ ಪಾಠವು ಅ.9ರಂದು ಸಮಾಪನಗೊಂಡಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತಾಲೂಕು ಶಿವಳ್ಳಿ ಸಂಪದ ಅಧ್ಯಕ್ಷರಾದ ಸತೀಶ ಮುಡಂಬಡಿತ್ತಾಯರವರು ಮಾತನಾಡಿ, ಸಪ್ತಶತೀ ಪಾಠದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಗುರುಗಳಾದ ರಾಘವೇಂದ್ರ ಭಟ್ ತೋಟಂತ್ತಿಲ ಇವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.


ಶಿಷ್ಯಂದಿರೆಲ್ಲರೂ ಫಲಕಾಣಿಕೆಯನ್ನು ನೀಡಿ ಗುರುಗಳನ್ನು ಗೌರವಿಸಿದರು. ಗುರುಗಳಾದ ರಾಘವೇಂದ್ರ ಭಟ್ ಇವರು ದೈವಾನುಕೂಲದಿಂದ ಇವೆಲ್ಲವೂ ಸಂಪನ್ನಗೊಂಡಿದೆ ಎನ್ನುವ ಅಭಿಮಾನದ ನುಡಿಗಳನ್ನು ಆಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ಮಾತನಾಡಿ, ಇಂತಹ ವೈದಿಕ ಪಾಠಗಳು ಹಾಗೂ ಪಾರಾಯಣಗಳು ದೇವಾಲಯದಲ್ಲಿ ಸದಾ ಆಗುತ್ತಿರಬೇಕು, ಇದು ಉತ್ತಮ ಕಾರ್ಯವಾಗಿದೆ ಎಂದರು.

ತಾಲೂಕು ಕಾರ್ಯದರ್ಶಿ ಬಾಲಚಂದ್ರ ಮುಚ್ಚಿಂತಾಯ ಹಾಗೂ ತಾಲೂಕು ಸಂಘಟನಾ ಕಾರ್ಯದರ್ಶಿ ರವೀಂದ್ರ ನೆಲ್ಯಾಡಿ ಇವರು ಶಿಷ್ಯರಾಗಿ ತಮ್ಮ ಅನುಭವಗಳನ್ನು ಹಂಚಿಕೊAಡರು. ರಾಮಕುಂಜ ವಲಯದ ಅಧ್ಯಕ್ಷರಾದ ಸೂರ್ಯಪ್ರಕಾಶ ಉಡುಪ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಜೊತೆ ಕಾರ್ಯದರ್ಶಿ ಸಂತೋಷ ಕುಮಾರ್ ಕುಂಞಕ್ಕು ವಂದಿಸಿದರು.

LEAVE A REPLY

Please enter your comment!
Please enter your name here