ಜಮೀನಿನ ಹಕ್ಕುಪತ್ರ ಮಾಡಿಸಿಕೊಡುವುದಾಗಿ ರೂ. 3.30 ಲಕ್ಷ ವಂಚನೆ ಪ್ರಕರಣ: ಆರೋಪಿಗೆ ನಿರೀಕ್ಷಣಾ ಜಾಮೀನು

0

ಕಡಬ: 94(ಸಿ) ಅಡಿಯಲ್ಲಿ ಜಮೀನಿನ ಹಕ್ಕುಪತ್ರ ಮಾಡಿಸಿಕೊಡುವುದಾಗಿ ನಂಬಿಸಿ ಹಣ ಪಡೆದು ವಂಚನೆ ಹಾಗೂ ಜೀವ ಬೆದರಿಕೆ ಹಾಕಿದ ಆರೋಪಿ ಪದ್ಮನಾಭ ಎಂಬವರಿಗೆ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

2024ರ ಅಕ್ಟೋಬರ್‌ನಿಂದ 2025ರ ಮೇ ಅವಧಿಯಲ್ಲಿ ಜಮೀನಿನ ಹಕ್ಕುಪತ್ರ ಮಾಡಿಸಿಕೊಡುವುದಾಗಿ ನಂಬಿಸಿ ನಗದು ಹಾಗೂ ಚೆಕ್‌ಗಳ ಮೂಲಕ ಒಟ್ಟು ರೂ. 3.30 ಲಕ್ಷ ಪಡೆದುಕೊಳ್ಳಲಾಗಿದೆ. ಆದರೆ, ಹಕ್ಕುಪತ್ರ ಮಾಡಿಸಿಕೊಡದೆ ಹಣವನ್ನು ವಾಪಸು ನೀಡುವಂತೆ ಕೇಳಿದಾಗ, ನಾನು ಕೆಡಿಪಿ ಸದಸ್ಯನಾಗಿದ್ದು, ನಮ್ಮದೇ ಸರ್ಕಾರವಿದೆ ಎಂದು ಹೇಳಿ ಮನೆ ತೆರವುಗೊಳಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಶಿರಾಡಿ ಗ್ರಾಮದ ಗುಂಡ್ಯ ನಿವಾಸಿ ಸರಿತಾ ಎಂಬವರು ನೀಡಿದ್ದ ದೂರಿನ ಮೇರೆಗೆ ಪದ್ಮನಾಭ ಅವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿ ಪದ್ಮನಾಭ ಅವರಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಆರೋಪಿ ಪರವಾಗಿ ಕಡಬದ ನ್ಯಾಯವಾದಿಗಳಾದ ಲೋಕೇಶ್ ಕೋಣಾಜೆ ಮಾಲ, ಕೃಷ್ಣಪ್ಪ ಗೌಡ, ವಿನಯ ಕಳುವಾಜೆ ಹಾಗೂ ಕವನ ಏನೆಕಲ್ಲು ವಾದಿಸಿದ್ದರು.

LEAVE A REPLY

Please enter your comment!
Please enter your name here