ಕ್ಷೇತ್ರಗಳ ಕರಡು ಮೀಸಲು ಪಟ್ಟಿ ಪ್ರಕಟ : ಆಕ್ಷೇಪಣೆ ಸಲ್ಲಿಕೆಗೆ ಅ.19ರ ಸಂಜೆ 5 ಗಂಟೆವರೆಗೆ ಅವಕಾಶ

0

ಪುತ್ತೂರು:ಅವಧಿ ಮುಗಿದು ವರ್ಷ ಐದಾಗುತ್ತಾ ಬಂದರೂ ಚುನಾವಣೆ ನಡೆಯದೇ ಇದ್ದ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿಗಳ ಚುನಾವಣೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು ಇದೀಗ ಕ್ಷೇತ್ರಗಳ ಮೀಸಲಾತಿ ಕರಡು ಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ.ಈಗಾಗಲೇ ಒಟ್ಟು ಸ್ಥಾನಗಳು ಮತ್ತು ವರ್ಗವಾರು ಮೀಸಲಾತಿ ಸಂಖ್ಯೆಯನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದ್ದ ಸರ್ಕಾರ ಇದೀಗ ಕ್ಷೇತ್ರಗಳ ಮೀಸಲಾತಿಗೆ ಸಂಬಂಧಿಸಿ ಕರಡು ಅಧಿಸೂಚನೆಯನ್ನು ಹೊರಡಿಸಿದೆ.ಈ ಅಧಿಸೂಚನೆಯು ಈಗಾಗಲೇ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡಿದೆ.

ಆಕ್ಷೇಪಣೆಗಳಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಅ.19ರ ಸಂಜೆ 5 ಗಂಟೆಯ ಒಳಗೆ ಸಲ್ಲಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪದನಿಮಿತ್ತ ಕಾರ್ಯದರ್ಶಿಗಳು ಮತ್ತು ಪಂಚಾಯತ್‌ರಾಜ್ ಇಲಾಖೆಯ ನಿರ್ದೇಶಕರೂ ಆಗಿರುವ ಕೃಷ್ಣಮೂರ್ತಿ ಕೆ.ಎಚ್.ಅವರು ಆದೇಶದಲ್ಲಿ ತಿಳಿಸಿದ್ದಾರೆ.


ಮೀಸಲು ಸಂಖ್ಯೆ:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಪಂಚಾಯತ್‌ನ ಒಟ್ಟು 14 ಸ್ಥಾನಗಳಲ್ಲಿ 7 ಸ್ಥಾನಗಳನ್ನು ಮಹಿಳೆಗೆ ಮೀಸಲಿರಿಸಲಾಗಿದೆ.2 ಸ್ಥಾನಗಳನ್ನು ಅನುಸೂಚಿತ ಜಾತಿಗೆ ನಿಗದಿ ಪಡಿಸಲಾಗಿದ್ದು ಈ ಪೈಕಿ ಒಂದು ಸ್ಥಾನ ಮಹಿಳೆಗೆ,ಅನುಸೂಚಿತ ಪಂಗಡದ ಮಹಿಳೆಗೆ 1, ಹಿಂದುಳಿದ ವರ್ಗ ಎ 3 ಸ್ಥಾನ.ಇದರಲ್ಲಿ 2 ಮಹಿಳೆಗೆ, ಹಿಂದುಳಿದ ವರ್ಗ ಬಿ 1 ಸ್ಥಾನ ನಿಗದಿ ಪಡಿಸಲಾಗಿದೆ.ಸಾಮಾನ್ಯ 7 ಸ್ಥಾನಗಳನ್ನು ನಿಗದಿಪಡಿಸಲಾಗಿದ್ದು ಇದರಲ್ಲಿ 2 ಸ್ಥಾನಗಳು ಮಹಿಳೆಗೆ ಮೀಸಲು.


ಕಡಬ ತಾಲೂಕು ಪಂಚಾಯತ್:
ಕಡಬ ತಾಲೂಕು ಪಂಚಾಯತ್‌ನ 12 ಸ್ಥಾನಗಳಲ್ಲಿ 6 ಮಹಿಳಾ ಮೀಸಲು.ಅನುಸೂಚಿತ ಜಾತಿ 2 ಸ್ಥಾನಗಳಲ್ಲಿ ಒಂದು ಮಹಿಳೆಗೆ, ಅನುಸೂಚಿತ ಪಂಗಡಕ್ಕೆ 1 ಸ್ಥಾನ ನಿಗದಿಯಾಗಿದ್ದು ಅದನ್ನು ಮಹಿಳೆಗೆ ಕಾದಿರಿಸಲಾಗಿದೆ.ಹಿಂದುಳಿದ ವರ್ಗ ಎ 2 ಸ್ಥಾನ. ಈ ಪೈಕಿ 1 ಮಹಿಳೆಗೆ, ಹಿಂದುಳಿದ ವರ್ಗ ಬಿ ಒಂದು ಸ್ಥಾನವನ್ನು ಮಹಿಳೆಗೆ ಕಾದಿರಿಸಲಾಗಿದೆ.ಸಾಮಾನ್ಯ ವರ್ಗಕ್ಕೆ 6 ಸ್ಥಾನಗಳನ್ನು ನಿಗದಿಪಡಿಸಲಾಗಿದ್ದು ಇದರಲ್ಲಿ 2 ಸ್ಥಾನ ಮಹಿಳೆಗೆ ಮೀಸಲು.


ಆಕ್ಷೇಪಣೆ ಸಲ್ಲಿಸಲು ಅ.19ರ ಸಂಜೆ 5ರ ತನಕ ಅವಕಾಶ:
ಆಕ್ಷೇಪಣೆಗಳಿದ್ದಲ್ಲಿ ಅ.19ರ ಸಂಜೆ 5 ಗಂಟೆಯ ಒಳಗೆ ಪೂರಕ ದಾಖಲೆಗಳೊಂದಿಗೆ ಖುದ್ದಾಗಿ ಇಲ್ಲವೇ ಅಂಚೆಯ ಮೂಲಕ,ಸರ್ಕಾರದ ಕಾರ್ಯದರ್ಶಿ(ಪಂಚಾಯತ್‌ರಾಜ್),ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಝ್ ಇಲಾಖೆ, ಬಹುಮಹಡಿಗಳ ಕಟ್ಟಡ, 3ನೇ ಹಂತ, ,3ನೇ ಮಹಡಿ ಡಾ ಅಂಬೇಡ್ಕರ್ ವೀದಿ,ಬೆಂಗಳೂರು-560001 ಇವರಿಗೆ ತಲುಪುವಂತೆ ಸಲ್ಲಿಸಬೇಕು.ಕೊನೆಯ ದಿನಾಂಕದ ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಅಂಚೆಯ ಮೂಲಕ ಆಕ್ಷೇಪಣೆಗಳು ಕಚೇರಿಗೆ ಸ್ವೀಕೃತವಾಗಲು ಆಗುವ ವಿಳಂಬಕ್ಕೆ ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಜವಾಬ್ದಾರಿಯಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಮತ್ತು ಪುತ್ತೂರು,ಕಡಬ,ಬೆಳ್ತಂಗಡಿ, ಬಂಟ್ವಾಳ, ಸುಳ್ಯ ತಾ.ಪಂ.ಕ್ಷೇತ್ರಗಳು ಮತ್ತು ಕರಡು ಮೀಸಲು ವಿವರ ಒಳಪುಟದಲ್ಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಮತ್ತು ಕರಡು ಮೀಸಲಾತಿ

ಹಳೆಯಂಗಡಿ-ಹಿಂದುಳಿದ ವರ್ಗ ಎ
ಬೆಳುವಾಯಿ-ಸಾಮಾನ್ಯ ಮಹಿಳೆ
ಪುತ್ತಿಗೆ-ಹಿಂದುಳಿದ ವರ್ಗ ಎ
68ನೇ ತೋಕೂರು-ಸಾಮಾನ್ಯ ಮಹಿಳೆ
ತೆಂಕ ಎಡಪದವು-ಸಾಮಾನ್ಯ ಮಹಿಳೆ
ಮೂಡುಶೆಡ್ಡೆ-ಹಿಂದುಳಿದ ವರ್ಗ ಎ ಮಹಿಳೆ
ಅಡ್ಯಾರ್-ಸಾಮಾನ್ಯ
ಮುನ್ನೂರು-ಸಾಮಾನ್ಯ ಮಹಿಳೆ
ಕೋಣಾಜೆ-ಸಾಮಾನ್ಯ
ಮಂಜನಾಡಿ-ಹಿಂದುಳಿದ ವರ್ಗ ಎ ಮಹಿಳೆ
ಸಂಗಬೆಟ್ಟು-ಹಿಂದುಳಿದ ವರ್ಗ ಎ
ಸರಪಾಡಿ-ಅನುಸೂಚಿತ ಜಾತಿ
ಸಜಿಪಮುನ್ನೂರು-ಹಿಂದುಳಿದ ವರ್ಗ ಎ ಮಹಿಳೆ
ಗೋಳ್ತಮಜಲು-ಸಾಮಾನ್ಯ
ಮಾಣಿ-ಸಾಮಾನ್ಯ ಮಹಿಳೆ
ಕೊಳ್ನಾಡು-ಹಿಂದುಳಿದ ವರ್ಗ ಬಿ
ಪುಣಚ-ಅನುಸೂಚಿತ ಪಂಗಡ ಮಹಿಳೆ
ಪುದು-ಸಾಮಾನ್ಯ
ನಾರಾವಿ-ಸಾಮಾನ್ಯ
ಅಳದಂಗಡಿ-ಅನುಸೂಚಿತ ಪಂಗಡ
ಲಾಯಿಲ-ಸಾಮಾನ್ಯ ಮಹಿಳೆ
ಉಜಿರೆ-ಸಾಮಾನ್ಯ
ಧರ್ಮಸ್ಥಳ-ಅನುಸೂಚಿತ ಜಾತಿ ಮಹಿಳೆ
ಕಣಿಯೂರು-ಹಿಂದುಳಿದ ವರ್ಗ ಬಿ ಮಹಿಳೆ
ಕುವೆಟ್ಟು-ಹಿಂದುಳಿದ ವರ್ಗ ಎ ಮಹಿಳೆ
ಉಪ್ಪಿನಂಗಡಿ-ಸಾಮಾನ್ಯ
ಆರ್ಯಾಪು-ಹಿಂದುಳಿದ ವರ್ಗ ಎ
ನರಿಮೊಗ್ರು-ಅನುಸೂಚಿತ ಜಾತಿ ಮಹಿಳೆ
ನೆಟ್ಟಣಿಗೆಮುಡ್ನೂರು-ಸಾಮಾನ್ಯ ಮಹಿಳೆ
ಕೊಯಿಲ-ಸಾಮಾನ್ಯ ಮಹಿಳೆ
ಸುಬ್ರಹ್ಮಣ್ಯ-ಹಿಂದುಳಿದ ವರ್ಗ ಎ ಮಹಿಳೆ
ಕುಟ್ರುಪ್ಪಾಡಿ-ಸಾಮಾನ್ಯ
ಬೆಳ್ಳಾರೆ-ಸಾಮಾನ್ಯ ಮಹಿಳೆ
ಜಾಲ್ಸೂರು-ಸಾಮಾನ್ಯ
ಗುತ್ತಿಗಾರು-ಹಿಂದುಳಿದ ವರ್ಗ ಎ


ಪುತ್ತೂರು ತಾಲೂಕು ಪಂಚಾಯತ್
ಕಬಕ-ಹಿಂದುಳಿದ ವರ್ಗ ಎ ಮಹಿಳೆ
ಬಲ್ನಾಡು-ಸಾಮಾನ್ಯ
೩೪ನೆಕ್ಕಿಲಾಡಿ-ಸಾಮಾನ್ಯ ಮಹಿಳೆ
ಉಪ್ಪಿನಂಗಡಿ-ಹಿಂದುಳಿದ ವರ್ಗ ಬಿ
ಬಜತ್ತೂರು-ಹಿಂದುಳಿದ ವರ್ಗ ಎ ಮಹಿಳೆ
ನರಿಮೊಗ್ರು-ಹಿಂದುಳಿದ ವರ್ಗ ಎ
ಸರ್ವೆ-ಅನುಸೂಚಿತ ಜಾತಿ
ಆರ್ಯಾಪು-ಸಾಮಾನ್ಯ ಮಹಿಳೆ
ಬೆಟ್ಟಂಪಾಡಿ-ಅನುಸೂಚಿತ ಪಂಗಡ ಮಹಿಳೆ
ಒಳಮೊಗ್ರು-ಸಾಮಾನ್ಯ
ಕೊಳ್ತಿಗೆ-ಅನುಸೂಚಿತ ಜಾತಿ ಮಹಿಳೆ
ಮಾಡ್ನೂರು-ಸಾಮಾನ್ಯ
ಪಡುವನ್ನೂರು-ಸಾಮಾನ್ಯ
ನೆಟ್ಟಣಿಗೆಮುಡ್ನೂರು-ಸಾಮಾನ್ಯ ಮಹಿಳೆ


ಕಡಬ ತಾಲೂಕು ಪಂಚಾಯತ್
ಕೊಯಿಲ-ಹಿಂದುಳಿದ ವರ್ಗ ಎ
ನೆಲ್ಯಾಡಿ-ಹಿಂದುಳಿದ ವರ್ಗ ಎ ಮಹಿಳೆ
ಆಲಂಕಾರು-ಸಾಮಾನ್ಯ
ಕೌಕ್ರಾಡಿ-ಸಾಮಾನ್ಯ
ಐತ್ತೂರು-ಹಿಂದುಳಿದ ವರ್ಗ ಬಿ ಮಹಿಳೆ
ನೂಜಿಬಾಳ್ತಿಲ-ಸಾಮಾನ್ಯ ಮಹಿಳೆ
ಸುಬ್ರಹ್ಮಣ್ಯ-ಅನುಸೂಚಿತ ಪಂಗಡ ಮಹಿಳೆ
ಬಳ್ಪ-ಸಾಮಾನ್ಯ
ಸವಣೂರು-ಅನುಸೂಚಿತ ಜಾತಿ ಮಹಿಳೆ
ಚಾರ್ವಾಕ-ಸಾಮಾನ್ಯ ಮಹಿಳೆ
ಕುಟ್ರುಪ್ಪಾಡಿ-ಅನುಸೂಚಿತ ಜಾತಿ
ಪೆರಾಬೆ-ಸಾಮಾನ್ಯ


ಸುಳ್ಯ ತಾಲೂಕು ಪಂಚಾಯತ್
ಬೆಳ್ಳಾರೆ-ಅನುಸೂಚಿತ ಜಾತಿ
ಬಾಳಿಲ-ಸಾಮಾನ್ಯ ಮಹಿಳೆ
ಐವರ್ನಾಡು-ಸಾಮಾನ್ಯ
ಜಾಲ್ಸೂರು-ಸಾಮಾನ್ಯ ಮಹಿಳೆ
ಅಜ್ಜಾವರ-ಅನುಸೂಚಿತ ಜಾತಿ ಮಹಿಳೆ
ಆಲೆಟ್ಟಿ-ಅನುಸೂಚಿತ ಪಂಗಡ ಮಹಿಳೆ
ಅರಂತೋಡು-ಹಿಂದುಳಿದ ವರ್ಗ ಎ ಮಹಿಳೆ
ಮಡಪ್ಪಾಡಿ-ಸಾಮಾನ್ಯ
ನೆಲ್ಲೂರು ಕೆಮ್ರಾಜೆ-ಸಾಮಾನ್ಯ ಮಹಿಳೆ
ಗುತ್ತಿಗಾರು-ಹಿಂದುಳಿದ ವರ್ಗ ಎ
ಪಂಜ-ಸಾಮಾನ್ಯ


ಬಂಟ್ವಾಳ ತಾಲೂಕು ಪಂಚಾಯತ್
ಸಂಗಬೆಟ್ಟು-ಹಿಂದುಳಿದ ವರ್ಗ ಎ ಮಹಿಳೆ
ಪಂಜಿಕಲ್ಲು-ಸಾಮಾನ್ಯ
ಪಿಲಾತಬೆಟ್ಟು-ಅನುಸೂಚಿತ ಜಾತಿ ಮಹಿಳೆ
ಮಣಿನಾಲ್ಕೂರು-ಹಿಂದುಳಿದ ವರ್ಗ ಎ
ನಾವೂರು-ಸಾಮಾನ್ಯ ಮಹಿಳೆ
ಕಾವಳಮುಡೂರು-ಸಾಮಾನ್ಯ
ಅಮ್ಮುಂಜೆ-ಹಿಂದುಳಿದ ವರ್ಗ ಎ ಮಹಿಳೆ
ಅಮ್ಟಾಡಿ- ಹಿಂದುಳಿದ ವರ್ಗ ಬಿ ಮಹಿಳೆ
ಸಜಿಪಮುನ್ನೂರು-ಸಾಮಾನ್ಯ
ಸಜಿಪಮೂಡ-ಸಾಮಾನ್ಯ
ನರಿಕೊಂಬು-ಸಾಮಾನ್ಯ ಮಹಿಳೆ
ಗೋಳ್ತಮಜಲು-ಸಾಮಾನ್ಯ
ಬಾಳ್ತಿಲ-ಹಿಂದುಳಿದ ವರ್ಗ ಎ
ಮಾಣಿ-ಸಾಮಾನ್ಯ
ವೀರಕಂಬ-ಸಾಮಾನ್ಯ
ವಿಟ್ಲಪಡ್ನೂರು-ಸಾಮಾನ್ಯ ಮಹಿಳೆ
ಕೆದಿಲ-ಸಾಮಾನ್ಯ ಮಹಿಳೆ
ಕೊಳ್ನಾಡು-ಹಿಂದುಳಿದ ವರ್ಗ ಎ
ಕನ್ಯಾನ-ಹಿಂದುಳಿದ ವರ್ಗ ಎಸ
ಮಂಚಿ-ಸಾಮಾನ್ಯ ಮಹಿಳೆ
ಪುಣಚ-ಅನುಸೂಚಿತ ಪಂಗಡ ಮಹಿಳೆ
ಅಳಿಕೆ-ಅನುಸೂಚಿತ ಪಂಗಡ
ವಿಟ್ಲಮುಡ್ನೂರು-ಸಾಮಾನ್ಯ ಮಹಿಳೆ
ಪುದು-ಹಿಂದುಳಿದ ವರ್ಗ ಎ ಮಹಿಳೆ
ತುಂಬೆ-ಸಾಮಾನ್ಯ ಮಹಿಳೆ


ಬೆಳ್ತಂಗಡಿ ತಾಲೂಕು ಪಂಚಾಯತ್
ನಾರಾವಿ-ಸಾಮಾನ್ಯ
ವೇಣೂರು-ಸಾಮಾನ್ಯ
ಹೊಸಂಗಡಿ-ಸಾಮಾನ್ಯ
ಅಂಡಿಂಜೆ-ಸಾಮಾನ್ಯ
ಅಳದಂಗಡಿ-ಸಾಮಾನ್ಯ
ಶಿರ್ಲಾಲು-ಸಾಮಾನ್ಯ
ಪಡಂಗಡಿ-ಸಾಮಾನ್ಯ ಮಹಿಳೆ
ಲಾಯಿಲ-ಹಿಂದುಳಿದ ವರ್ಗ ಎ
ನಡ-ಹಿಂದುಳಿದ ವರ್ಗ ಎ
ಮಿತ್ತಬಾಗಿಲು-ಸಾಮಾನ್ಯ ಮಹಿಳೆ
ಉಜಿರೆ-ಅನುಸೂಚಿತ ಪಂಗಡ ಮಹಿಳೆ
ಮುಂಡಾಜೆ-ಹಿಂದುಳಿದ ವರ್ಗ ಎ
ನೆರಿಯ-ಹಿಂದುಳಿದ ವರ್ಗ ಎ ಮಹಿಳೆ
ಧರ್ಮಸ್ಥಳ-ಅನುಸೂಚಿತ ಜಾತಿ
ಕೊಕ್ಕಡ-ಅನುಸೂಚಿತ ಜಾತಿ ಮಹಿಳೆ
ಕಳಂಜ-ಸಾಮಾನ್ಯ ಮಹಿಳೆ
ಇಳಂತಿಲ-ಸಾಮಾನ್ಯ ಮಹಿಳೆ
ತಣ್ಣೀರುಪಂಥ-ಸಾಮಾನ್ಯ ಮಹಿಳೆ
ಬಾರ್ಯ-ಹಿಂದುಳಿದ ವರ್ಗ ಎ ಮಹಿಳೆ
ಮಾಲಾಡಿ-ಸಾಮಾನ್ಯ
ಕುವೆಟ್ಟು-ಹಿಂದುಳಿದ ವರ್ಗ ಬಿ ಮಹಿಳೆ
ಕೊಯ್ಯೂರು-ಹಿಂದುಳಿದ ವರ್ಗ ಎ ಮಹಿಳೆ

LEAVE A REPLY

Please enter your comment!
Please enter your name here