ಪುತ್ತೂರಿನ ಚಾಲಕನ ಸಮಯಪ್ರಜ್ಞೆ : ಗಿಡುಗ ಬಡಿದರೂ ಬಸ್ ನಿಯಂತ್ರಿಸಿ ಪ್ರಯಾಣಿಕರ ರಕ್ಷಣೆ

0

ಪುತ್ತೂರು: ಚಲಿಸುತ್ತಿದ್ದ ಖಾಸಗಿ ಬಸ್‌ಗೆ ಗಿಡುಗ ಬಡಿದ ಘಟನೆ ಹಳೆಯಂಗಡಿ ಸಮೀಪ ನಡೆದಿದೆ.

ಪುತ್ತೂರು ಮೂಲದ ಚಾಲಕ ಹರೀಶ್ ಪೂಜಾರಿ ಚಲಾಯಿಸುತ್ತಿದ್ದ ಖಾಸಗಿ ಬಸ್‌ಗೆ ಹಳೆಯಂಗಡಿ ಸಮೀಪ ಗಿಡುಗ ಬಡಿದಿದ್ದು, ಬಸ್‌ನ ಮುಂಭಾಗದ ಗಾಜು ಜಖಂಗೊಂಡಿದೆ. ಈ ವೇಳೆ ಪ್ರಯಾಣಿಕರೋರ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಘಟನೆ ಸಂಭವಿಸುತ್ತಿದ್ದಂತೆ ಯಾವುದೇ ಆತಂಕಕ್ಕೆ ಒಳಗಾಗದೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ ಬಸ್ ಚಾಲಕ ಹರೀಶ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here