ಪೆರುವಾಜೆ ಜಲದುರ್ಗಾ ದೇವಸ್ಥಾನಕ್ಕೆ 100 ಚಯರ್, ಗೋಡ್ರೇಜ್ ಕಪಾಟು ಕೊಡುಗೆ

0

ಕಾಣಿಯೂರು: ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನಕ್ಕೆ 100 ಚಯರ್ ಗಳನ್ನು ಕೊಡುಗೆಯಾಗಿ ನೀಡಲಾಯಿತು.


ರೋಟರಿಯನ್ ರವೀಂದ್ರಗೌಡ ಅವರು ದೇವಸ್ಥಾನಕ್ಕೆ ಗೋಡ್ರೇಜ್ ಕಪಾಟನ್ನು ಕೊಡುಗೆಯಾಗಿ ನೀಡಿದರು. ಅ.10ರಂದು ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಆರಿಫ್ ಬಿ.ಎಂ. ಅವರು ದೇವಸ್ಥಾನದ ಆಡಳಿತ ಮೊಕ್ತೇಸರ ಸುನಿಲ್ ರೈ ಪೆರುವಾಜೆ ಅವರಿಗೆ ಚಯರ್ ಅನ್ನು ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ರವೀಂದ್ರಗೌಡ ಅವರು ನೀಡಿದ ಗೋಡ್ರೇಜ್ ಕಪಾಟನ್ನು ದೇವಸ್ಥಾನಕ್ಕೆ ಹಸ್ತಾಂತರಿಸಲಾಯಿತು.


ರೋಟರಿ ಕ್ಲಬ್‌ನ ಸದಸ್ಯರ ಸಹಕಾರದೊಂದಿಗೆ ದೇವಸ್ಥಾನದ ಅಗತ್ಯಕ್ಕೆ ಸ್ಪಂದಿಸಿ ಈ ಕೊಡುಗೆಗಳನ್ನು ನೀಡಲಾಗಿದೆ. ಸೇವೆಯೇ ರೋಟರಿಯ ಧ್ಯೇಯ ಎಂಬ ಆಶಯದೊಂದಿಗೆ ಕೈಗೊಂಡ ಈ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ನ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here