







ಪುತ್ತೂರು: ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಕೌಡಿಚ್ಚಾರ್ ವ್ಯಾಪ್ತಿಯ ಅರಿಯಡ್ಕ ಮತ್ತು ಮಾಡ್ನೂರು ಗ್ರಾಮಗಳಲ್ಲಿ 16ನೇ ವರ್ಷದ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ನಡೆಯಿತು.ಜಾನುವಾರು ಅಭಿವೃದ್ಧಿ ಅಧಿಕಾರಿ ಪುಷ್ಪರಾಜ್ ಶೆಟ್ಟಿ, ಪುತ್ತೂರು ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ರೇಬೀಸ್ ಬಗ್ಗೆ ಮಾಹಿತಿ ನೀಡಿದರು.



ಹಿರಿಯ ಪಶು ವೈದ್ಯ ಪರೀಕ್ಷಕರಾದ ವೀರಪ್ಪ ಜಮಾದಾರ್ ಸ್ವಾಗತಿಸಿ ವಂದಿಸಿದರು. ಇಲಾಖೆಯಿಂದ ಲಸಿಕೆದಾರರಾಗಿ ಆಗಮಿಸಿದ್ದ ಕಿರಿಯ ಪಶು ವೈದ್ಯಕೀಯ ಪರೀಕ್ಷಕರಾದ ರೋಹಿತ್ (ಕೆದಂಬಾಡಿ), ಡಿ ದರ್ಜೆ ನೌಕರರಾದ ಪ್ರದೀಪ್ ಪಾಣಾಜೆ, ಸುನಿಲ್ ಕುಮಾರ್ ಕೊಳ್ತಿಗೆ ಮತ್ತು ಸರೋಜಾ ಹಾಜರಿದ್ದರು.



ಪಶು ಸಖಿಯರಾದ ಸವಿತಾ ಒಳಮೊಗ್ರು, ಪೂರ್ಣಿಮಾ ಅರಿಯಡ್ಕ, ತೇಜಸ್ವಿನಿ ನಿಡ್ಪಳ್ಳಿ ಮತ್ತು ಕೃಷಿ ಸಖಿ ಪುಷ್ಪ ಅರಿಯಡ್ಕ ಸಹಕರಿಸಿದರು. ಮಾಜಿ ಗ್ರಾ.ಪಂ. ಸದಸ್ಯ ನಾರಾಯಣ ಚಾಕೋಟೆ, ಅರಿಯಡ್ಕ ಪಂಚಾಯತ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಅರಿಯಡ್ಕ ಮತ್ತು ಮಾಡ್ನೂರು ಗ್ರಾಮಸ್ಥರು ಹಾಜರಿದ್ದರು.ಎರಡೂ ಗ್ರಾಮಗಳಲ್ಲಿ ಒಟ್ಟು 355 ನಾಯಿ ಮತ್ತು 10 ಬೆಕ್ಕುಗಳಿಗೆ ಲಸಿಕೆ ಹಾಕಲಾಯಿತು.










