







ಗಣಪತಿ ಹವನ, ವಾರ್ಷಿಕ ಬಲಿವಾಡು ಸಮರ್ಪಣೆಗೆ ಚಾಲನೆ


ಕಾಣಿಯೂರು: ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ನವರಾತ್ರಿ ಉತ್ಸವ ಅ.10 ರಂದು ಆರಂಭಗೊಂಡಿತು.



ಬೆಳಗ್ಗೆ ಗಣಪತಿ ಹವನ, ಹುಂಡಿ ಸಮರ್ಪಣೆ ನಡೆದು ನವರಾತ್ರಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ದೀಪ ಬೆಳಗಿಸಿದರು. ಈ ಸಂದರ್ಭದಲ್ಲಿ ಪವಿತ್ರಪಾಣಿ ಸುಬ್ರಹ್ಮಣ್ಯ ನಿಡ್ವಣ್ಣಾಯ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುನಿಲ್ ಕುಮಾರ್ ರೈ ಪೆರುವಾಜೆ ಗುತ್ತು, ಸದಸ್ಯರಾದ ದೀಪಕ್ ಶೆಟ್ಟಿ ಪೆರುವಾಜೆ, ಪ್ರಮೋದ್ ರೈ ಪೆರುವಾಜೆ, ಶೇಷಪ್ಪ ಮಠತಡ್ಕ, ಅಜಯ್ ಶೆಟ್ಟಿ ಪೆರುವಾಜೆ, ಸುಂದರಿ, ಮಾಜಿ ಅಧ್ಯಕ್ಷರಾದ ಪಿ.ಪದ್ಮನಾಭ ಶೆಟ್ಟಿ, ನಿರಂಜನ ಶೆಟ್ಟಿ ಪಾಲ್ತಾಡು, ಮಾಜಿ ಸದಸ್ಯರಾದ ವೆಂಕಟಕೃಷ್ಣ ರಾವ್, ಸರ್ವೇಶ್ ಹೆಬ್ಬಾರ್, ದಿವಾಕರ ರೈ ಕೊಳಂಬಳ, ಕಚೇರಿ ವ್ಯವಸ್ಥಾಪಕ ವಸಂತ ಆಚಾರ್ಯ ಪೆರುವಾಜೆ, ಪೂರ್ಣಲತಾ ಮೊದಲಾದವರಿದ್ದರು.
ಬಲಿವಾಡು ಸಮರ್ಪಣೆ
ಶ್ರೀ ಕ್ಷೇತ್ರದಲ್ಲಿ ನಡೆಯುವ ನವರಾತ್ರಿ ಪ್ರಯುಕ್ತ ಇಂದಿನಿಂದ ಭಕ್ತಾದಿಗಳು ಪ್ರತೀ ಮನೆಯಿಂದ ಕನಿಷ್ಠ ಒಂದು ತೆಂಗಿನಕಾಯಿ, ಒಂದು ಸೇರು ಬೆಳ್ತಿಗೆ ಅಕ್ಕಿ (ಸೋನಾ ಮಸೂರಿ), ಒಂದು ಕುಡ್ತ ಶುದ್ಧ ಎಳ್ಳೆಣ್ಣೆ, ಒಂದು ಸೀಯಾಳ, ಎಲೆ ಅಡಿಕೆ ಹಾಗೂ ರೂ. 101-00 ದೇವರಿಗೆ ಸಮರ್ಪಿಸಿ ಪ್ರಸಾದ ಸ್ವೀಕರಿಸುತ್ತಾರೆ. ಗ್ರಂಥಾಧಾರದ ಪ್ರಕಾರ ಪೆರುವಾಜೆ, ಕೊಡಿಯಾಲ, ಬೆಳ್ಳಾರೆ, ಕಳಂಜ, ಮುಪ್ಪರ್ಯ, ಬಾಳಿಲ, ಮುರುಳ್ಯ, ಐವರ್ನಾಡು ಹಾಗೂ ಪುತ್ತೂರು ತಾಲೂಕಿನ ಕೊಳ್ತಿಗೆ, ಪಾಲ್ತಾಡಿ, ಕೆಯ್ಯೂರು, ಕೆದಂಬಾಡಿ, ಮುಂಡೂರು, ಸರ್ವೆ, ಕಡಬ ತಾಲೂಕಿನ ಪುಣ್ಚಪ್ಪಾಡಿ, ಸವಣೂರು, ಕುದ್ಮಾರು, ಬೆಳಂದೂರು, ಕ್ಯಾಮಣ, ಕಾಣಿಯೂರು ಹಾಗೂ ಚಾರ್ವಾಕ ಗ್ರಾಮಸ್ಥರು ಬಲಿವಾಡು ಸಮರ್ಪಿಸುವ ಪದ್ಧತಿ ಇದೆ.










