ಮಠಂತಬೆಟ್ಟು ಮಹಿಷಮರ್ದಿನಿ ದೇವಳದಲ್ಲಿ‌ ನವರಾತ್ರಿ ಉತ್ಸವದ ಸಂಭ್ರಮ- ಹಸಿರುವಾಣಿ ಅರ್ಪಣೆ

0

ಪುತ್ತೂರು: ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ನವರಾತ್ರಿ ಉತ್ಸವದ ಅಂಗವಾಗಿ ಹಸಿರುವಾಣಿಯ ಸಮರ್ಪಣೆ ಅ.11ರಂದು ನಡೆಯಿತು.


ವಿನಾಯಕ ನಗರದಲ್ಲಿರುವ ಶ್ರೀ ಮಹಿಷಮರ್ದಿನಿ ದ್ವಾರದ ಬಳಿ ಹಿರಿಯರಾದ ವಿಠಲ ಶೆಟ್ಟಿ ಪಿಜಿನಡ್ಕ, ಎಲ್ಯಣ್ಣ ಗೌಡ ಮೇಲಿನಹಿತ್ಲು-ಬಾರಿಕೆ, ಕುಸುಮಾವತಿ ಡೆಕ್ಕಾಜೆ ಮತ್ತು ಚಂದ್ರಶೇಖರ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು ಅವರು ಹೊರೆಕಾಣಿಕೆಯ ಮೆರವಣಿಗೆ ಉದ್ಘಾಟಿಸಿದರು. ಬಳಿಕ ಮಠಂತಬೆಟ್ಟುವರೆಗೆ ನಡೆದ ಮೆರವಣಿಗೆಯನ್ನು ದೇವಳದಲ್ಲಿ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಪ್ರಧಾನ ಅರ್ಚಕ ರಾಮಕೃಷ್ಣ ಭಟ್ ಪ್ರಾರ್ಥನೆ ನೆರವೇರಿಸಿದರು. ನಂತರ ಹಸಿರುವಾಣಿ ಯನ್ನು ದೇವರಿಗೆ ಅರ್ಪಿಸಲಾಯಿತು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಭಂಡಾರಿ ಕೈಪ ಸಹಿತ ಹಲವು ಭಕ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here